ಕರ್ನಾಟಕ

karnataka

ETV Bharat / bharat

ಅಂತರ ಕಾಪಾಡಿ:  ಕೊರೊನಾ ವೈರಸ್​ ಅಂಟುವಿಕೆಯಿಂದ  ದೂರವಿರಿ - ಕೆಮ್ಮು

ವಿಮಾನದ ಕ್ಯಾಬಿನ್​ನಲ್ಲಿರುವ ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ವೈರಸ್​ಗಳು ಅತಿ ವೇಗವಾಗಿ ಎಲ್ಲೆಡೆ ಚದುರುತ್ತವೆ. ವ್ಯಕ್ತಿಯ ಹತ್ತಿರ ಕುಳಿತ 10 ಜನರಿಗೆ ಇಂಥ ಸಂದರ್ಭದಲ್ಲಿ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ.

Be Careful with Droplets
Be Careful with Droplets

By

Published : May 5, 2020, 7:31 PM IST

ಕೊರೊನಾ ವೈರಸ್​ ಸೋಂಕಿತ ವ್ಯಕ್ತಿಯು ನಿಮ್ಮ ಹತ್ತಿರದಲ್ಲಿ ನಿಂತು ಸೀನುವುದು ಅಥವಾ ಕೆಮ್ಮುವುದಕ್ಕಿಂತ ಅಪಾಯಕಾರಿ ಈಗಿನ ಸನ್ನಿವೇಶದಲ್ಲಿ ಮತ್ತೊಂದಿಲ್ಲ. ಗಾಳಿಯಲ್ಲಿ, ಕಚೇರಿಯಲ್ಲಿ ಅಷ್ಟೇ ಏಕೆ ವಿಮಾನದಲ್ಲೂ ಕೊರೊನಾ ವೈರಸ್​ ಸೋಂಕಿತನಿಂದ ವೈರಸ್​ ಹರಡುತ್ತದೆ. ಅಂದರೆ ಕೊರೊನಾ ವೈರಸ್​ ಹರಡುವ ವ್ಯಾಪ್ತಿ ಎಷ್ಟು ವಿಶಾಲವಾಗಿದೆ ಎಂಬುದನ್ನು ನೀವು ಊಹಿಸಬಹುದು.

Be Careful with Droplets

ಕೊರೊನಾ ವೈರಸ್​ ಹರಡುವಿಕೆಯ ಕುರಿತು ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯವು ಚಿತ್ರಗಳ ಸಣ್ಣ ಕ್ಲಿಪ್ಪಿಂಗ್ ಒಂದನ್ನು ರಚಿಸಿದೆ. ಸೋಂಕಿತ ವ್ಯಕ್ತಿಯೊಬ್ಬ ಕುಳಿತಾಗ ಹಾಗೂ ಚಲನೆಯಲ್ಲಿರುವಾಗ ವೈರಸ್​ ಎಷ್ಟು ವೇಗದಲ್ಲಿ ಹರಡುತ್ತದೆ ಎಂಬುದನ್ನು ಇದರಲ್ಲಿ ಬಿಂಬಿಸಲಾಗಿದೆ.

Be Careful with Droplets

ವಿಮಾನದ ಕ್ಯಾಬಿನ್​ನಲ್ಲಿ ಕುಳಿತಾಗ: ವಿಮಾನದ ಕ್ಯಾಬಿನ್​ನಲ್ಲಿರುವ ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ವೈರಸ್​ಗಳು ಅತಿ ವೇಗವಾಗಿ ಎಲ್ಲೆಡೆ ಚದುರುತ್ತವೆ. ವ್ಯಕ್ತಿಯ ಹತ್ತಿರ ಕುಳಿತ 10 ಜನರಿಗೆ ಇಂಥ ಸಂದರ್ಭದಲ್ಲಿ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ. ಮಾಸ್ಕ್​ ಧರಿಸುವ ಮೂಲಕ ಈ ರೀತಿ ವೈರಸ್​ ದಾಳಿಯನ್ನು ತಡೆಗಟ್ಟಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಓಡುತ್ತಿರುವಾಗ: ಇಬ್ಬರು ವ್ಯಕ್ತಿಗಳು ಒಬ್ಬರ ಹಿಂದೊಬ್ಬರು ಓಡುತ್ತಿದ್ದಾರೆ ಎಂದಿಟ್ಟುಕೊಳ್ಳಿ.. ಮುಂದಿರುವ ವ್ಯಕ್ತಿಯು ಕೆಮ್ಮಿದಾಗ ಹಿಂದೆ ಬರುತ್ತಿರುವ ವ್ಯಕ್ತಿಯ ಮೇಲೆ ಭಾರಿ ಪ್ರಮಾಣದ ಡ್ರಾಪ್ಲೆಟ್ಸ್​ಗಳು( ಸೀನಿನ ಹನಿಗಳು) ಸಿಂಪಡಣೆಯಾಗುವ ಸಾಧ್ಯತೆಗಳಿರುತ್ತವೆ. ಆದರೆ ಇಬ್ಬರೂ ವ್ಯಕ್ತಿಗಳ ಮಧ್ಯೆ ಸಾಕಷ್ಟು ಅಂತರವಿಟ್ಟುಕೊಂಡು ಓಡುತ್ತಿದ್ದರೆ ಯಾವುದೇ ಅಪಾಯವಿರುವುದಿಲ್ಲ. ಸೋಂಕಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ವೈರಸ್​ ಖಂಡಿತವಾಗಿಯೂ ಹರಡುತ್ತದೆ ಎನ್ನುತ್ತಾರೆ ಸಂಶೋಧಕರು.

ABOUT THE AUTHOR

...view details