ನವದೆಹಲಿ:ಮಹಾತ್ಮ ಗಾಂಧಿಯವರ 72ನೇ ಪುಣ್ಯ ಸ್ಮರಣೆ ಹಾಗೂ ಹುತಾತ್ಮರ ದಿನಾಚರಣೆಯ ಅಂಗವಾಗಿ, ರಾಜಘಟ್ನ ಗಾಂಧಿ ಸಮಾಧಿ ಬಳಿ 'ಸರ್ವ ಧರ್ಮ ಪ್ರಾರ್ಥನೆ' ನಡೆಯಲಿದೆ.
ಆದರೆ ಇದೇ ವೇಳೆ ವಿದ್ಯಾರ್ಥಿ ಸಂಘಟನೆಗಳು ಮತ್ತು ನಾಗರಿಕ ಸಮುದಾಯಗಳು ರಾಜ್‌ಘಾಟ್‌ನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ತಮ್ಮ ಶಕ್ತಿ ಪ್ರದರ್ಶನ ತೋರಲು ಕರೆ ನೀಡಿವೆ. ಅಲ್ಲದೆ ಪ್ರತಿಭಟನಾಕಾರರು ರಾಜ್‌ಘಾಟ್‌ನಲ್ಲಿ ಮಾನವ ಸರಪಳಿಯನ್ನು ರಚಿಸಲಿದ್ದಾರೆ. ನಂತರ ಶಾಹೀನ್ ಭಾಗ್ ಹಾಗೂ ಖಜುರಿ ಖಾಸ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.
"ರಾಜ್‌ಘಾಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಾನವ ಸರಪಳಿಗೆ ಕೆಲವು ಸಂಸ್ಥೆಗಳು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ ಆದರೆ, ಇದು ಪ್ರತಿಭಟನಾ ಮೆರವಣಿಗೆ ನಡೆಸಲು ಸರಿಯಾದ ಮಾರ್ಗವಲ್ಲವಾದ್ದರಿಂದ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಕೇಂದ್ರ ದೆಹಲಿಯ ಡಿ ಸಿ ಪಿ ಹೇಳಿದ್ದಾರೆ.