ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ 1100 ಅಡಿ ಎತ್ತರದಲ್ಲಿ ಮಹಾಶಿವರಾತ್ರಿ ಆಚರಣೆ.. - ಶಂಕರಾಚಾರ್ಯ ದೇವಸ್ಥಾನ

ಕಾಶ್ಮೀರ ಕಣಿವೆಯ ಸುಂದರ ತಾಣದಲ್ಲಿ 1,100 ಅಡಿ ಎತ್ತರದಲ್ಲಿ ಶಿವನ ದೇವಸ್ಥಾನದಲ್ಲಿ ಈ ಬಾರಿ ಮಹಾಶಿವರಾತ್ರಿ ಆಚರಣೆ ಮಾಡಲಾಗಿದೆ. ಈ ದೇಗುಲಕ್ಕೆ ಹಲವು ಶತಮಾನಗಳ ಹಿಂದೆ ಸಮಾಜ ಸುಧಾರಕ ಶಂಕಾರಾಚಾರ್ಯರು ಭೇಟಿ ಮಾಡಿದ್ದರು ಎಂಬ ಕಾರಣಕ್ಕೆ ಈ ದೇಗುಲಕ್ಕೆ ಅವರ ಹೆಸರನ್ನೇ ಇಡಲಾಗಿದೆ.

Mahashivaratri celebration at 1100 feet in Kashmir
ಶಂಕರಾಚಾರ್ಯ ದೇವಸ್ಥಾನ

By

Published : Feb 21, 2020, 7:37 PM IST

ಶ್ರೀನಗರ (ಝುಲ್ಕರ್‌ನೇನ್‌ ಝುಲ್ಫಿ): ಕಾಶ್ಮೀರ ಕಣಿವೆ ಸುಂದರ ತಾಣದಲ್ಲಿ 1,100 ಅಡಿ ಎತ್ತರದಲ್ಲಿ ಶಿವನ ದೇವಸ್ಥಾನದಲ್ಲಿ ಈ ಬಾರಿ ಮಹಾಶಿವರಾತ್ರಿಯನ್ನ ಆಚರಣೆ ಮಾಡಲಾಗಿದೆ. ಈ ದೇಗುಲಕ್ಕೆ ಹಲವು ಶತಮಾನಗಳ ಹಿಂದೆ ಸಮಾಜ ಸುಧಾರಕ ಶಂಕಾರಾಚಾರ್ಯರು ಭೇಟಿ ಮಾಡಿದ್ದರು ಎಂಬ ಕಾರಣಕ್ಕೆ ಈ ದೇಗುಲಕ್ಕೆ ಅವರ ಹೆಸರನ್ನೇ (ಶಂಕರಾಚಾರ್ಯ ದೇವಸ್ಥಾನ) ಇಡಲಾಗಿದೆ.

ಝಬರ್ವಾನ್‌ ಪರ್ವತ ಶ್ರೇಣಿಯ ಈ ಶಿವನ ದೇಗುಲವು ಯಾತ್ರಾರ್ಥಿಗಳ ಆಕರ್ಷಣೆಯ ಕೇಂದ್ರ. ವಿಶ್ವದ ಹಲವೆಡೆಯಿಂದ ಭಕ್ತಾದಿಗಳು ಮತ್ತು ಪ್ರವಾಸಿಗರು ಆಗಮಿಸಿದ್ದರು. ಮಹಾಶಿವರಾತ್ರಿಯಲ್ಲಿ ರಾತ್ರಿ ವೇಳೆ ಇಲ್ಲಿನ ಕಾಶ್ಮೀರಿ ಪಂಡಿತರು ಹೇಳುವಂತೆ ಹೇರತ್ ವೇಳೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷವೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಅಗಮಿಸಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ.

ಹೇರತ್‌ ಸಮಯದಲ್ಲಿ ಕೇವಲ ಜಮ್ಮು ಕಾಶ್ಮೀರ ಹಾಗೂ ಸುತ್ತಲಿನ ರಾಜ್ಯಗಳ ಜನರಷ್ಟೇ ಅಲ್ಲ, ಇಡೀ ಭಾರತದ ವಿವಿಧ ಕಡೆಗಳಿಂದ ಆಗಮಿಸುತ್ತಾರೆ. ವಿಶ್ವದ ವಿವಿಧ ಭಾಗದ ಹಿಂದೂಗಳು ಕೂಡ ಪಾಲ್ಗೊಂಡು ಶಿವನ ಸಾನ್ನಿಧ್ಯದಲ್ಲಿ ಶಿವರಾತ್ರಿ ಕಳೆಯುತ್ತಾರೆ. ಬೋಲೆನಾಥ ಎಂದೂ ಕರೆಯಲ್ಪಡುವ ಶಿವ ಯಾರಿಗೂ ನಿರಾಸೆ ಮಾಡುವುದಿಲ್ಲ ಎಂದು ಭಕ್ತಾದಿಗಳು ನಂಬಿದ್ದಾರೆ. ಆದರೆ, ಇಲ್ಲಿ ಬರುವವರು ಆತ್ಮಶುದ್ಧಿಯಿಂದ ಪ್ರಾರ್ಥನೆ ಮಾಡಬೇಕು. ಹೃದಯಪೂರ್ವಕವಾಗಿ ಶಿವನಲ್ಲಿ ಬೇಡಿಕೊಳ್ಳಬೇಕು. ಮಹಾಶಿವರಾತ್ರಿಯಂದು ಇಡೀ ರಾತ್ರಿ ಭಕ್ತಾದಿಗಳು ಜಾಗರಣೆ ಮಾಡುತ್ತಾರೆ.

ಉಪವಾಸ, ವ್ರತ, ತಪಗಳನ್ನು ಮಾಡುತ್ತಾರೆ. ಜಗತ್ತನ್ನು ಕತ್ತಲು ಹಾಗೂ ಅಜ್ಞಾನದಿಂದ ದೂರ ಮಾಡು ಎಂದು ಅವರು ಬೇಡಿಕೊಳ್ಳುತ್ತಾರೆ. ಆದರೆ, ಈ ಬಾರಿ ಈ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡು ಎಂದೂ ಶಿವನನ್ನು ಬೇಡಿಕೊಂಡಿದ್ದಾರೆ.

'ನಾನು ಇಲ್ಲಿ ಕುಟುಂಬ ಸಮೇತ ಬಂದಿದ್ದೇನೆ. ಕುಟುಂಬದ ಎಲ್ಲರಿಗಾಗಿ ನಾವು ಪೂಜೆ ಸಲ್ಲಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರದಲ್ಲಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ಇಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸುವಂತೆ ಮಾಡು ಎಂದು ಶಿವನಲ್ಲಿ ಬೇಡಿಕೊಂಡಿದ್ದೇವೆ ಎಂದು ಜಮ್ಮು ನಾಗರಿಕ ರೇಣುಕಾ ಗುಪ್ತಾ ಅವರು 'ಈಟಿವಿ ಭಾರತ್‌'ಗೆ ಪ್ರತಿಕ್ರಿಯಿಸಿದ್ದಾರೆ.

ನೇಪಾಳದ ಇನ್ನೊಬ್ಬ ಭಕ್ತರು ಹೇಳುವಂತೆ 'ನಾವು ಬಸ್‌, ಜೀಪ್‌, ರೈಲು ಹಾಗೂ ನಂತರ ತವೇರಾ ವಾಹನದ ಮೂಲಕ ಇಲ್ಲಿಗೆ ಬಂದಿದ್ದೇವೆ. ಬೋಲಾನಾಥ ಎಲ್ಲ ಸಂಕಷ್ಟವನ್ನೂ ದೂರ ಮಾಡುತ್ತಾನೆ. ನಂಬಿಕೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡು ಇಲ್ಲಿ ಬಂದಿದ್ದೇವೆ. ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ನಾವು ಶಿವನಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ.'

ಸಹಿಷ್ಣುತೆಯ ಉದಾಹರಣೆ:ಇತಿಹಾಸಕಾರರು ಹೇಳುವಂತೆ ಎತ್ತರದ ಸ್ಥಳದಲ್ಲಿ ಈ ಶಿವನ ಮೂರ್ತಿಯನ್ನು ಮೊದಲು ಸ್ಥಾಪಿಸಿದ್ದು ರಾಜ ಸಂದಿಮನ್‌. ನಂತರ 1368ರಲ್ಲಿ ರಾಜ ಗೋಪಾದಿತ್ಯ ಪುನರುಜ್ಜೀವನಗೊಳಿಸಿದ. ಕಾಶ್ಮೀರದ ಮುಸ್ಲಿಂ ದೊರೆ ಝೈನ್‌ ಉಲ್‌ ಅಬ್ದಿನ್‌ ಕೂಡ ಈ ದೇವಸ್ಥಾನದ ಶಿಖರವನ್ನು ಸರಿಪಡಿಸಿದ ಎಂದು ಹೇಳಲಾಗುತ್ತದೆ. ಒಮ್ಮೆ ಭೂಕಂಪದಿಂದಾಗಿ ಶಿಖರ ಮುರಿದುಹೋಗಿತ್ತಂತೆ. ನಂತರ 1844ರಲ್ಲಿ ಸಿಖ್​ ಆಡಳಿತಗಾರ ಶೇಖ್‌ ಗುಲಾಂ ಮೋಹಿಯುದ್ದಿನ್‌ ಕೂಡ ದೇವಸ್ಥಾನದ ಶಿಖರವನ್ನು ಸರಿಪಡಿಸಿದ ಎಂದು ಹೇಳುತ್ತಾರೆ.

ಜಗತ್ಪ್ರಸಿದ್ಧ ದಾಲ್‌ ಸರೋವರಕ್ಕೆ ಪೂರ್ವದಲ್ಲಿ ಶಂಕರಾಚಾರ್ಯ ದೇಗುಲವಿದ್ದರೆ, ದುರಾನಿ ಕಾಲದಲ್ಲಿ ನಿರ್ಮಿಸಿದ ಹರಿಪರ್ಬತ್‌ ಕೋಡೆಯು ಪಶ್ಚಿಮದಲ್ಲಿದೆ. ಈ ದೇಗುಲವು ಹರಿಪರ್ಬತ್‌ ಅಥವಾ ಕೂಹ್‌ ಎ ಮರನ್‌ಗೆ ಮುಖ ಮಾಡಿದೆ. ಈ ಹರಿಪರ್ಬತ್‌ನಲ್ಲಿ ಮಸೀದಿ, ಹಿಂದು ದೇವಸ್ಥಾನ ಮತ್ತು ಗುರುದ್ವಾರ ಕೂಡ ಇವೆ. ಇದೊಂದು ಧಾರ್ಮಿಕ ಸಹಿಷ್ಣುತೆಯ ಸ್ಥಳ ಎಂದು ಶಿವ ಭಕ್ತರು ಕರೆಯುತ್ತಾರೆ.

ಆಸಕ್ತಿಕರ ಸಂಗತಿಯೆಂದರೆ ಈ ದೇಗುಲ 250 ಮೆಟ್ಟಿಲುಗಳನ್ನು ಹೊಂದಿದ್ದು, ಅರೆ ಸೇನಾ ಪಡೆಯ ಕಾವಲು ಈ ದೇಗುಲಕ್ಕಿದೆ. ಭದ್ರತಾ ಕಾರಣಗಳಿಗಾಗಿ ಕಾರುಗಳು, ಮೊಬೈಲ್‌, ವೀಡಿಯೋ ಮತ್ತು ಕ್ಯಾಮೆರಾಗಳಿಗೆ ನಿಷೇಧ ಹೇರಲಾಗಿದೆ. ಇವುಗಳನ್ನು ದೇಗುಲದ ಸಮೀಪಕ್ಕೂ ತೆಗೆದುಕೊಂಡು ಹೋಗುವಂತಿಲ್ಲ.

ABOUT THE AUTHOR

...view details