ನವದೆಹಲಿ:ಮಹಾರಾಷ್ಟ್ರ ಹಾಲಿ ಸರ್ಕಾರದ ಭವಿಷ್ಯ ನಿರ್ಧರಿಸುವ ಮಹತ್ವದ ತೀರ್ಪನ್ನುಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ನಾಳೆ ಸಂಜೆ 5 ಗಂಟೆ ಒಳಗೆ ಬಹುಮತ ಸಾಬೀತು ಮಾಡುವಂತೆ ಸಿಎಂ ಫಡ್ನವೀಸ್ಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಬಹುಮತ ಸಾಬೀತು ಕಲಾಪ ನೇರಪ್ರಸಾರ ಮಾಡಲು ಸುಪ್ರೀಂಕೋರ್ಟ್ ಸೂಚಿಸಿದೆ.
ಜಸ್ಟೀಸ್ ಎನ್.ವಿ.ರಮಣ ನೇತೃತ್ವದ ಪೀಠದಿಂದ ಈ ಮಹತ್ವದ ತೀರ್ಪು ಹೊರ ಬಿದ್ದಿದ್ದು, ಬಹುಮತ ಸಾಬೀತು ಕಲಾಪದ ವೇಳೆ ಯಾವುದೇ ಗುಪ್ತ ಮತದಾನಕ್ಕೆ ಅವಕಾಶ ಇರಕೂಡದು, ಎಲ್ಲವೂ ಬಹಿರಂಗವಾಗಿ ನೇರಪ್ರಸಾರದ ಮೂಲಕವೇ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಸುಪ್ರೀಂ ತೀರ್ಪಿನ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಪರ ವಕೀಲ ಹಂಗಾಮಿ ಸ್ಪೀಕರ್ ಅವರನ್ನ ನೇಮಕ ಮಾಡಿ ಬೆಳಗ್ಗೆ ಎಲ್ಲ ಶಾಸಕರು ಪ್ರಮಾಣವಚನ ಸ್ವೀಕರಿಸಿ ನಂತರದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಸಂಜೆ 5 ಗಂಟೆ ವೇಳೆಯ ಒಳಗಾಗಿ ಬಹಿರಂಗವಾಗಿ ಬಹುಮತ ಸಾಬೀತು ಪ್ರಕ್ರಿಯೆ ಕೊನೆಗೊಳ್ಳಬೇಕು ಎಂದು ತ್ರಿಸದಸ್ಯಪೀಠ ಆದೇಶಿಸಿದೆ.
ಮಹಾರಾಷ್ಟ್ರ ರಾಜಕೀಯ ಕ್ಷಿಪ್ರ ಸಂಚಲನ ನೀಡಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡೆಯನ್ನು ಪ್ರಶ್ನಿಸಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ. ಭಾನುವಾರ ಸಲ್ಲಿಕೆಯಾದ ರಿಟ್ ಅರ್ಜಿ ಸತತ ಎರಡು ದಿನಗಳ ವಿಚಾರಣೆ ನಡೆದಿದೆ. ಸೋಮವಾರ ವಾದ - ಪ್ರತಿವಾದ ಕೊನೆಗೊಂಡಿತ್ತು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಸಾಕಷ್ಟು ಹೈಡ್ರಾಮಾಗಳು ನಡೆದು ಕೊನೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಇದರ ನಡುವೆ ಶಿವಸೇನೆ-ಎನ್ಸಿಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆಗೆ ಬಹುತೇಕ ಎಲ್ಲವನ್ನೂ ಅಂತಿಮಗೊಳಿಸಿದ್ದವು. ಆದರೆ, ಕಳೆದ ಶುಕ್ರವಾರದಿಂದ ಶನಿವಾರ ಮುಂಜಾನೆ ನಡುವೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್ ಮತ್ತೆ ಸಿಎಂ ಪಟ್ಟ ಅಲಂಕರಿಸಿದ್ದರು. ಎನ್ಸಿಪಿ ನಾಯಕ ಅಜಿತ್ ಪವಾರ್ ಬೆಂಬಲ ಬಲದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ವಾದ-ಪ್ರತಿವಾದ ಮಂಡಿಸುವ ವಕೀಲರು:
- ಕಪಿಲ್ ಸಿಬಲ್ - ಶಿವಸೇನೆ ಪರ
- ಅಭಿಷೇಕ್ ಮನುಸಿಂಘ್ವಿ - ಕಾಂಗ್ರೆಸ್-ಎನ್ಸಿಪಿ ಪರ
- ಮುಕುಲ್ ರೋಹ್ಟಗಿ - ಮಹಾರಾಷ್ಟ್ರ ಬಿಜೆಪಿ ಪರ
- ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ - ರಾಜ್ಯಪಾಲರ ಕಾರ್ಯದರ್ಶಿ ಪರ
- ಮಣಿಂದರ್ ಸಿಂಗ್ - ಅಜಿತ್ ಪವಾರ್ ಪರ
ತ್ರಿಸದಸ್ಯ ಪೀಠ:
- ಜಸ್ಟೀಸ್ ಎನ್.ವಿ.ರಮಣ
- ಅಶೋಕ್ ಭೂಷಣ್
- ಸಂಜೀವ್ ಖನ್ನಾ