ಕರ್ನಾಟಕ

karnataka

ETV Bharat / bharat

ಮಹಾ ಅಧಿವೇಶನದಲ್ಲಿ ವಿಶ್ವಾಸಮತ ಗೆದ್ದ ಠಾಕ್ರೆ:  ಬಿಜೆಪಿಯಿಂದ ಸಭಾತ್ಯಾಗ - Floor test started maharastra

ಮಹಾನಾಟಕದ ನಂತರ ಮಹಾರಾಷ್ಟ್ರದಲ್ಲಿ ಉದ್ದವ್​ ಠಾಕ್ರೆ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಇಂದು ವಿಶ್ವಾಸಮತ ಮಂಡನೆ ಮಾಡಿದೆ. ಈ ನಡುವೆ ಬಿಜೆಪಿ ಸದಸ್ಯರು ಕಲಾಪವನ್ನ ನಿಯಮಬಾಹಿರವಾಗಿ ನಡೆಸಲಾಗುತ್ತಿದೆ. ಅಧಿವೇಶನ ಕರೆದ ನೀತಿ ಸರಿಯಾಗಿಲ್ಲ ಎಂದು ಆರೋಪಿಸಿ ಸಭಾತ್ಯಾಗ ಮಾಡಿತು.

Maharastra's Udbav Takre's govt Floor test
ಬಹುಮತ ಸಾಬೀತಿಗೆ ಸನ್ನದ್ಧವಾದ ಕಲಾಪ

By

Published : Nov 30, 2019, 2:50 PM IST

Updated : Dec 2, 2019, 7:23 AM IST


ಮಹಾರಾಷ್ಟ್ರ:ಗುರುವಾರ ಅಧಿಕೃತವಾಗಿ ಸರ್ಕಾರ ರಚನೆ ಮಾಡಿರುವ ಶಿವಸೇನೆ- ಕಾಂಗ್ರೆಸ್​ ಎನ್​ಸಿಪಿ ಮೈತ್ರಿಕೂಟದ ಸರ್ಕಾರ ಇಂದು ವಿಶ್ವಾಸಮತ ಸಾಬೀತು ಮಾಡಿದೆ. ಸದನದಲ್ಲಿ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​​ ವಿಶ್ವಾಸಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿವೆ.

ಸರ್ಕಾರದ ಪರ 169 ಶಾಸಕರು ಮತದಾನ ಮಾಡಿದರು. ಈ ಮೂಲಕ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನಾ ಮೈತ್ರಿಕೂಟ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿದೆ. ಸರಳ ಬಹುಮತಕ್ಕೆ 145 ಮತಗಳಷ್ಟೇ ಬೇಕಿತ್ತು. ಆದರೆ ಸರ್ಕಾರ 169 ಸದಸ್ಯರ ಬೆಂಬಲದಿಂದ ವಿಶ್ವಾಸಮತ ಸಾಬೀತು ಪಡಿಸಿದೆ.

ಕಲಾಪ ಆರಂಭವಾಗುತ್ತಿದ್ದಂತೆಉದ್ದವ್​ಠಾಕ್ರೆ ವಿಶ್ವಾಸ ಮತಯಾಚನೆ ಮಾಡಿದರು.ಈ ನಡುವೆ, ಬಿಜೆಪಿ ವಿಧಾನಸಭೆ ಅಧಿವೇಶನ ಕರೆದಿರುವ ಸರ್ಕಾರ ಕ್ರಮ ಸರಿಯಾಗಿಲ್ಲ. ಇದ್ದಕ್ಕಿದ್ದಂತೆ ಹಂಗಾಮಿ ಸ್ಪೀಕರ್​ ಅವರನ್ನ ಬದಲಿಸಲಾಗಿದೆ ಎಂದು ಆರೋಪಿಸಿತು. ಬಿಜೆಪಿ ನಾಯಕ ದೇವೇಂದ್ರ ಪಡ್ನವಿಸ್​ ಸರ್ಕಾರದ ನಡಾವಳಿಯನ್ನ ಖಂಡಿಸಿದರು.

ವಿಶ್ವಾಸಮತ ಗೆದ್ದ ಠಾಕ್ರೆ

ಇದರಿಂದಾಗಿ ಕಲಾಪದಲ್ಲಿ ತೀವ್ರ ಗದ್ದಲ ಉಂಟಾಗಿದ್ದು, ಹೊಸ ಅಧಿವೇಶನ ನಡೆಸುವುದಕ್ಕೂ ಮೊದಲು ರಾಜ್ಯಪಾಲರನ್ನು ಕರೆಸಬೇಕು. ಆದರೆ ಇದಾವ ನಿಯಮಗಳನ್ನು ಪಾಲನೆ ಮಾಡದೇ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡ್ನವೀಸ್​ ಅರೋಪಿಸಿದರು.

ಇದೇ ವೇಳೆ, ಬಿಜೆಪಿ ವಿಶ್ವಾಸಮತ ಯಾಚನೆ ವಿರೋಧಿಸಿ ಬಿಜೆಪಿ ಸಭಾತ್ಯಾಗ ಮಾಡಿತು. ಸಭಾತ್ಯಾಗ ಮಾಡಿ ಮಾತನಾಡಿದ ಮಾಜಿ ಸಿಎಂ ದೇವೇಂದ್ರ ಪಡ್ನವಿಸ್​ ಸರ್ಕಾರ ವಿಧಾನಸಭೆ ಕಲಾಪದ ನಿಯಮಗಳನ್ನ ಗಾಳಿಗೆ ತೂರಿದೆ. ಹೀಗೆ ನಿಯಮಬಾಹಿರವಾಗಿ ಅಧಿವೇಶನ ನಡೆಸುತ್ತಿರುವುದು ದೇಶದಲ್ಲೇ ಮೊದಲ ಬಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಇದ್ದಕ್ಕಿದ್ದಂತೆ ಹಂಗಾಮಿ ಸ್ಪೀಕರ್​ ಬದಲಿಸಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ.

Last Updated : Dec 2, 2019, 7:23 AM IST

ABOUT THE AUTHOR

...view details