ಮಹಾರಾಷ್ಟ್ರ: ಕೇಂದ್ರ ಸರ್ಕಾರದ ಸಿಎಎ,ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆಯ ವಿರುದ್ಧ ವಿವಿದ ಸಂಘಟನೆಗಳು ಪ್ರತಿಭಟನೆ ವೇಳೆ ಬಲವಂತವಾಗಿ ಅಂಗಡಿ ಮುಚ್ಚಿಸುವುದಕ್ಕೆ ಪಯತ್ನಿಸಿ ಮಹಿಳೆಯೊಬ್ಬರಿಂದ ಖಾರದಪುಡಿ ಎರಚಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಯವತಮಲ್ನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಖಾರದ ಪುಡಿ ನೈವೇದ್ಯ ಮಾಡಿದ ಮಹಿಳೆ! ವಿಡಿಯೋ ನೋಡಿ - ಮಹಾರಾಷ್ಟ್ರದ ಯವತಮಲ್
ಕೇಂದ್ರ ಸರ್ಕಾರದ ಸಿಎಎ, ಹಾಗೂ ಎನ್ಆರ್ಸಿ ಕಾಯ್ದೆಯ ವಿರುದ್ಧ ವಿವಿದ ಸಂಘಟನೆಗಳಿಂದ ನಡೆದ ಪ್ರತಿಭಟನೆ ವೇಳೆ ಮಹಿಳೆಯೊಬ್ಬರು ಖಾರದಪುಡಿಯನ್ನು ಎರಚಿರುವ ವಿಡಿಯೋ ವೈರಲ್ ಆಗಿದೆ.
ವಿವಿಧ ಸಂಘಟನೆಗಳು ದೇಶದೆಲ್ಲೆಡೆಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ವಿರೋಧಿಸಿಭಾರತ್ ಬಂದ್ಗೆ ಕರೆ ನೀಡಿದ್ದವು. ಮಹಾರಾಷ್ಟ್ರದ ಯವತಮಲ್ ಎಂಬಲ್ಲೂ ಪ್ರತಿಭಟನಕಾರರು ಬಂದ್ ನಡೆಸಿದ್ದರು. ಈ ವೇಳೆ ಒತ್ತಾಯವಾಗಿ ಅಂಗಡಿ ಮುಚ್ಚುವಂತೆ ಮಹಿಳೆಯೊಬ್ಬರಿಗೆ ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಕ್ಕೆ ಅಂಗಡಿ ಮಾಲಿಕೆ ಆಕ್ರೋಶಿತಗೊಂಡು ಅಲ್ಲಿ ನೆರೆದಿದ್ದವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ.
ಕಣ್ಣಿನ ಉರಿ ತಾಳಲಾರದೆ ಹಲವಾರು ಪ್ರತಿಭಟನಾಕಾರರು ಸ್ಥಳದಿಂದ ಜಾಗ ಖಾಲಿಮಾಡಿದ್ರೆ, ಇನ್ನುಳಿದವರು ಮಹಿಳೆಯ ಕೆಲಸಕ್ಕೆ ಆಕ್ರೋಶಿತರಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.