ಕರ್ನಾಟಕ

karnataka

ETV Bharat / bharat

ಜಸ್ಟ್​ ಮಿಸ್​... ಸಿಎಂ ಬೆಂಗಾವಲು ಕಾರ್​ನಿಂದ ಯುವಕ ಪಾರು! ವಿಡಿಯೋ... - ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಬೆಂಗಾವಲು ಕಾರ್​ ಸುದ್ದಿ

ಒಂದು ಅರೆ ಕ್ಷಣದಲ್ಲಿ ಯುವಕನೋರ್ವ ಸಿಎಂ ಬೆಂಗಾವಲು ಕಾರಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ. ಆದ್ರೆ ಚಾಲಕನ ಜಾಗೃತಿಯಿಂದ ಆತನ ಪ್ರಾಣ ಉಳಿದಿದೆ.

ಸಿಎಂ ಬೆಂಗಾವಲು ಕಾರ್​ನಿಂದ ಯುವಕ ಪಾರು

By

Published : Aug 25, 2019, 2:35 PM IST

ಬುಲ್ದಾನ್​:ಸಿಎಂ ಬೆಂಗಾವಲು ಕಾರಿಗೆ ಯುವಕನೋರ್ವ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಅಚ್ಚರಿ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸಿಎಂ ಬೆಂಗಾವಲು ಕಾರ್​ನಿಂದ ಯುವಕ ಪಾರು

ಹೌದು, ಜನಾದೇಶ ಯಾತ್ರಾ ಹಿನ್ನೆಲೆ ನಿನ್ನೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಬುಲ್ದಾನ್​ಗೆ ಭೇಟಿ ನೀಡಿದ್ದರು. ಈ ವೇಳೆ ಅರುಣ್​ ಜೇಟ್ಲಿ, ನಿಧನದ ಮಾಹಿತಿ ತಿಳಿದು ಕಾರ್ಯಕ್ರಮವನ್ನು ಮುಂದೂಡಿದರು. ಶ್ರೀ ಗಜಾನನ ಮಹಾದೇವಾಲಯಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದರು. ಈ ವೇಳೆ ಯುವಕನೋರ್ವ ಸಡನ್​ ಆಗಿ ಸಿಎಂ ಬೆಂಬಲಿಗರ ಕಾರಿಗೆ ಗುದ್ದಿ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ.

ಅರೆ ಕ್ಷಣ ಕಾರಿನ ಚಾಲಕ ಜಾಗೃತೆ ವಹಿಸದೇ ಇದ್ದಿದ್ದರೆ, ಯುವಕನ ತಲೆ ಮೇಲೆ ಸಿಎಂ ಬೆಂಬಲಿಗರ ಕಾರು ಚಲಾಯಿಸುತಿತ್ತು. ಬೆಂಗಾವಲು ಕಾರಿನ ಚಾಲಕ ಕಾರನ್ನು ಪಕ್ಕಕ್ಕೆ ತೆಗೆದುಕೊಂಡು ನಿಲ್ಲಿಸಿದ್ದಾರೆ. ಈ ವೇಳೆ ಘಟನೆಯಿಂದ ಬೈಕ್​ ಸವಾರಿನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details