ಕರ್ನಾಟಕ

karnataka

ETV Bharat / bharat

ಮುಂಬೈ: ವಾಸೈ ರೋಡ್ ಯಾರ್ಡ್‌ನಲ್ಲಿ ಹಳಿ ತಪ್ಪಿದ ಎರಡು ಬೋಗಿಗಳು - ವಾಸೈ ರೋಡ್ ಯಾರ್ಡ್

ಪ್ರಮುಖ ಟ್ರಾಲಿಯನ್ನು ಮೇಲಕ್ಕೆ ಎತ್ತಿದಾಗ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದು, ಈಗ ಬೋಗಿಗಳನ್ನು ಜೋಡಿಸಲಾಗಿದೆ. ಯಾರೊಬ್ಬರ ಜೀವಕ್ಕೂ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ಪಶ್ಚಿಮ ರೈಲ್ವೆ ಹೇಳಿದೆ.

Two coaches of train derail at Vasai Road Yard
ಹಳಿ ತಪ್ಪಿದ ಬೋಗಿಗಳು

By

Published : Aug 12, 2020, 1:04 PM IST

ಮುಂಬೈ (ಮಹಾರಾಷ್ಟ್ರ): ವಾಸೈ ರೋಡ್ ಯಾರ್ಡ್‌ನಲ್ಲಿ ಮಂಗಳವಾರ ರೈಲಿನಲ್ಲಿ ಎರಡು ಬೋಗಿಗಳು ಹಳಿ ತಪ್ಪಿವೆ. ಪ್ರಮುಖ ಟ್ರಾಲಿಯನ್ನು ಮೇಲಕ್ಕೆ ಎತ್ತಿದಾಗ ಹಳಿ ತಪ್ಪಿದ್ದು, ಈಗ ಬೋಗಿಗಳನ್ನು ಹಳಿಗೆ ಜೋಡಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ಹೇಳಿದೆ. ಯಾರೊಬ್ಬರ ಜೀವಕ್ಕೂ ಯಾವುದೇ ರೀತಿ ಹಾನಿ ಸಂಭವಿಸಿಲ್ಲ.

ನೈರುತ್ಯ ಕೋಚ್​​ಗೆ ಟ್ರಾಲಿ ಮೂಲಕ ಲೈನ್ ನಂ.1ರಿಂದ ದಿವಾ ಲೈನ್ ನಂ.5ರ ಹಳಿಗೆ ರೈಲು ಬೋಗಿಗಳನ್ನು ತಿರುಗಿಸುವಾಗ (ಶಂಟಿಂಗ್‌ ನೆಕ್‌) ಒಂದು ಬೋಗಿ ಹಳಿ ತಪ್ಪಿದೆ. ಮತ್ತೊಂದು ಇಂಜಿನ್‌ನಿಂದ 3ನೇ ಕೋಚ್‌ನ ಪ್ರಮುಖ ಟ್ರಾಲಿಯನ್ನು ಮೇಲಕ್ಕೆ ಎತ್ತುವಾಗ 2ನೇ ಬೋಗಿ ಹಳಿ ತಪ್ಪಿತು.

ಶಂಟಿಂಗ್​ ಮಾಡುವಂತೆ ಆಗಸ್ಟ್​​ 11ರಂದು ಸಂಜೆ 4.54 ಸುಮಾರಿಗೆ ಪಶ್ಚಿಮ ರೈಲ್ವೆ ಆದೇಶಿಸಿತ್ತು. ಹಳಿ ತಪ್ಪಿದ ಬೋಗಿಗಳನ್ನು 9.04 ಗಂಟೆಗೆ ಮರು ಜೋಡಣೆ ಮಾಡಲಾಯಿತು.

ABOUT THE AUTHOR

...view details