ಚಂದ್ರಪುರ: ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ತಡೋಬಾ ಅಂಧಾರಿ ಟೈಗರ್ ರಿಸರ್ವ್ (ಟಿಎಟಿಆರ್) ವ್ಯಾಪ್ತಿ ಪ್ರದೇಶದಲ್ಲಿ 63 ವರ್ಷದ ಮಹಿಳೆಯನ್ನು ಹುಲಿ ಸಾಯಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ ಈ ಘಟನೆ ನಡೆದಿದ್ದು, ಮೃತರನ್ನು ಕೋಲಾರ ಗ್ರಾಮದ ನಿವಾಸಿ ಲೀಲಾಬಾಯಿ ಜಿವ್ಟೋಡ್ ಎಂದು ಗುರುತಿಸಲಾಗಿದೆ. ಮೃತರು ಟೆಂಡೂ ಎಲೆಗಳನ್ನು ತರಲು ಸತಾರಾ ಕಾಡಿಗೆ (ಸಂರಕ್ಷಿತ ಅರಣ್ಯ ಪ್ರದೇಶ) ತೆರಳಿದ್ದರು. ಈ ವೇಳೆ ಹುಲಿ ದಾಳಿ ಮಾಡಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಟಿಎಟಿಆರ್) ಎನ್.ಆರ್. ಪ್ರವೀಣ್ ಹೇಳಿದ್ದಾರೆ.