ಸೋಲಾಪುರ(ಮಹಾರಾಷ್ಟ್ರ): ಕಾರ್-ಟ್ರಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಸೋಲಾಪುರ ಜಿಲ್ಲೆಯ ಪಿಸ್ವಾಡಿಪತಿಲ್ ಗ್ರಾಮದ ಬಳಿ ಶನಿವಾರ ನಡೆದಿದೆ.
ದೇವರ ದರ್ಶನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಆರು ಜನ ದುರ್ಮರಣ - ಒಂದೇ ಕುಟುಂದ ಆರು ಜನರ ಸಾವು
ಕಾರ್-ಟ್ರಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ದುರ್ಘಟನೆ ಮಹಾರಾಷ್ಟ್ರದ ಪಿಸ್ವಾಡಿಪತಿಲ್ ಗ್ರಾಮದ ಬಳಿ ಶನಿವಾರ ಸಂಭವಿಸಿದೆ.
ಮೃತರೆಲ್ಲರನ್ನು ಸೋಲಾಪುರದ ಬಾರ್ಶಿತೆಹ್ಸಿಲ್ ಮೂಲದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅವರೆಲ್ಲರೂ ದೇವರ ದರ್ಶನಕ್ಕೆಂದು ಪುಣೆ ಜಿಲ್ಲೆಯ ಜೆಜುರಿಗೆ ತೆರಳುತ್ತಿದ್ದರು" ಎಂದು ವೇಲಾಪುರ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಶಿವರಾಜ್ ಫಾಲ್ಫಲೆ (38), ದಿನನಾಥ್ ಫಾಲ್ಫಲೆ (34), ವನಿತಾ ಶಿವರಾಜ್ ಫಾಲ್ಫಲೆ (30), ಉತ್ಕರ್ಷ ಶಿವರಾಜ್ ಫಾಲ್ಫಲೆ (14), ಉನ್ನತಿ ಶಿವರಾಜ್ ಫಾಲ್ಫಲೆ (10), ಮತ್ತು ಪಾರ್ವತಿ ಮಹಾದೇವ್ ಫಲ್ಫಲೆ (80) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಮಗು ಮತ್ತು ಇನ್ನೊಬ್ಬರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.