ಮಹಾರಾಷ್ಟ್ರ: ಅಹ್ಮದ್‌ನಗರದಲ್ಲಿ ಶಿವಸೇನೆ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಪಕ್ಷವೊಂದರ ಕಾರ್ಯಕರ್ತನನ್ನ ಗುಂಡಿಕ್ಕಿ ಹತ್ಯೆ... - ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲೆ
ಮಹಾರಾಷ್ಟ್ರದ ಕೋಪರ್ಗಾಂವ್ ಘಟಕದ ಉಪ ಜಿಲ್ಲಾಧ್ಯಕ್ಷ ಸುರೇಶ್ ಗಿರೇ ಪಾಟೀಲ್ ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೋಪರ್ಗಾಂವ್ ತಾಲೂಕಿನ ಭೋಜನೆ ಹಳ್ಳಿಯಲ್ಲಿನ ಅವರ ಮನೆಯಲ್ಲಿ ಆರು ಜನರ ತಂಡ ನಾಲ್ಕು ಸುತ್ತು ಗುಂಡು ಹಾರಿಸಿ ಕೊಂದಿದ್ದಾರೆ.
ಶಿವಸೇನೆ ಕಾರ್ಯಕರ್ತನ ಕೊಲೆ
ಕೋಪರ್ಗಾಂವ್ ಘಟಕದ ಉಪ ಜಿಲ್ಲಾಧ್ಯಕ್ಷ ಸುರೇಶ್ ಗಿರೇ ಪಾಟೀಲ್ ಸಾವಿಗೀಡಾದವರು. ಕೋಪರ್ಗಾಂವ್ ತಾಲೂಕಿನ ಭೋಜನೆ ಹಳ್ಳಿಯಲ್ಲಿನ ಅವರ ಮನೆಯಲ್ಲಿ ಆರು ಜನರ ತಂಡ ನಾಲ್ಕು ಸುತ್ತು ಗುಂಡು ಹಾರಿಸಿ ಕೊಂದಿದ್ದಾರೆ.
ಪಾಟೀಲ್ರನ್ನು ಕೊಲೆ ಮಾಡಿದ ನಂತರ ಆರು ಜನರು ಪರಾರಿಯಾಗಿದ್ದಾರೆ. ಇವರ ವಿರುದ್ಧ ದೂರು ದಾಖಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು ಮೃತ ಪಾಟೀಲ್ ಮೇಲೆ ಕೊಲೆ ಪ್ರಕರಣಗಳು, ಗಲಭೆ ಪ್ರಕರಣಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.