ಮುಂಬೈ:ಮಹಾರಾಷ್ಟ್ರ ಸರ್ಕಾರವು ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾ ರಾಜ್ಯಗಳಿಂದ ಬರುವವರಲ್ಲಿ ಕೋವಿಡ್-19 ಲಕ್ಷಣಗಳು ಕಂಡುಬಂದರೆ ಅವರನ್ನು ಹಿಂದಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದೆ.
ರೋಗ ಲಕ್ಷಣಗಳು ಇಲ್ಲದ ಪ್ರಯಾಣಿಕರಿಗೆ ರಾಜ್ಯ ಪ್ರವೇಶಿಸಲು ಅನುಮತಿಸಲಾಗುವುದು. ರೋಗ ಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರು ಹಿಂತಿರುಗಿ, ಚೇತರಿಸಿಕೊಂಡ ಬಳಿಕ ತಮ್ಮ ಮನೆಗೆ ಹೋಗುವ ಅವಕಾಶವಿದೆ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಕರಾಚಿ ಬಿಟ್ಹಾಕಿ, ಮೊದ್ಲು ಪಾಕ್ ಆಕ್ರಮಿತ ಕಾಶ್ಮೀರ ಮರಳಿ ತನ್ನಿ: ಫಡ್ನವಿಸ್ಗೆ ರಾವತ್ ಸವಾಲ್
ಎನ್‌ಸಿಆರ್ ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾ ವಿಮಾನ ನಿಲ್ದಾಣಗಳಿಂದ ಪ್ರಯಾಣಿಸುವ ಎಲ್ಲಾ ದೇಶೀಯ ಪ್ರಯಾಣಿಕರು ಬೋರ್ಡಿಂಗ್ ಮೊದಲು ಆರ್‌ಟಿ-ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ರಾಜ್ಯದ ಆಗಮನ ವಿಮಾನ ನಿಲ್ದಾಣದಲ್ಲಿರುವ ವೈದ್ಯಕೀಯ ತಂಡಗಳಿಗೆ ಅದನ್ನು ತೋರಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.