ಕರ್ನಾಟಕ

karnataka

ETV Bharat / bharat

ಕೊರೊನಾ ಸೋಂಕಿನಿಂದ ಮಹಾ ಸಚಿವ ಅಶೋಕ್ ಚೌವ್ಹಾಣ್​ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​ - ಸಚಿವ ಅಶೋಕ್ ಚವಾಣ್ ಡಿಸ್ಚಾರ್ಜ್​

ಮಹಾರಾಷ್ಟ್ರದ ಸಚಿವ ಅಶೋಕ್ ಚೌವ್ಹಾಣ್​ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Maharashtra: Minister Ashok Chavan recovers from COVID-19, discharged
ಕೊರೊನಾ ಸೋಂಕಿನಿಂದ ಸಚಿವ ಅಶೋಕ್ ಚವಾಣ್ ಗುಣಮುಖ..ಆಸ್ಪತ್ರೆಯಿಂದ ಡಿಸ್ಚಾರ್ಜ್​

By

Published : Jun 4, 2020, 6:33 PM IST

ಮುಂಬೈ:ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಹಾಲಿ ಸಚಿವ ಅಶೋಕ್ ಚೌವ್ಹಾಣ್​ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆಗೆ ತೆರಳಿದ ಅಶೋಕ್ ಚೌವ್ಹಾಣ್​ಗೆ ಮನೆಯವರು ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ. ಅಶೋಕ್ ಚೌವ್ಹಾಣ್​ಗೆ ಕೋವೀಡ್​-19 ದೃಢಪಟ್ಟ ಹಿನ್ನೆಲೆ ಮೇ 25ರಂದು ನಾಂದೇಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಅಶೋಕ್ ಚೌವ್ಹಾಣ್​ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದಕ್ಕೂ ಮುಂಚೆ ರಾಜ್ಯ ವಸತಿ ಸಚಿವ ಮತ್ತು ಎನ್‌ಸಿಪಿ ಮುಖಂಡ ಜಿತೇಂದ್ರ ಅವಾದ್ ಸಹ ಕೊರೊನಾಗೆ ತುತ್ತಾಗಿದ್ದರು. ಬುಧವಾರದವರೆಗೆ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 74,860 ಆಗಿತ್ತು. ಈವರೆಗೆ ರಾಜ್ಯದಲ್ಲಿ 2,587 ಜನರು ಕೊರೊನಾಗೆ ಬಲಿಯಾಗಿದ್ದಾರೆ.

ABOUT THE AUTHOR

...view details