ನವದೆಹಲಿ:ಕೊರೊನಾ ಪ್ರಕರಣಗಳ ಹೆಚ್ಚಳದಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ಸ್ವಲ್ಪ ಮಟ್ಟಿನ ತೊಂದರೆಯಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ.
ವಿಡಿಯೋ ಸಂವಾದದಲ್ಲಿ ಮಾತನಾಡಿ, ಬಿಹಾರದಲ್ಲಿ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸ್ವಲ್ಪ ಸಮಸ್ಯೆಯಿದೆ. ವಿಶೇಷವಾಗಿ ಮುಂಬೈ ಬಗ್ಗೆ ಸ್ವಲ್ಪ ಮಟ್ಟಿನ ಭೀತಿ ಇದೆ ಎಂದು ಹೇಳಿದ್ದಾರೆ .
ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಯವರು ನಾವು ಎಲ್ಲಾ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ. ಅವರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು. ಇನ್ನು, ಕರ್ನಾಟಕ ಮತ್ತು ಬಿಹಾರದ ಕಾರ್ಯದರ್ಶಿಗಳು ಕೊರೊನಾವನ್ನು ಮೆಟ್ಟಿ ನಿಲ್ಲುವ ಹುಮ್ಮಸ್ಸಿನಲ್ಲಿದ್ದಾರೆ ಎಂದಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಮಹಾರಾಷ್ಟ್ರವು 2,687 ಪ್ರಕರಣಗಳೊಂದಿಗೆ ಅತೀ ಹೆಚ್ಚು ಕೊರೊನಾ ಭಾದಿತ ರಾಜ್ಯವೆನಿಸಿಕೊಂಡಿದೆ. ಇದರಲ್ಲಿ 259 ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 178 ಜನ ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಒಟ್ಟು 277 ಪ್ರಕರಣಗಳು ದಾಖಲಾಗಿದ್ದು, 75 ಮಂದಿ ಗುಣಮುಖರಾಗಿದ್ದಾರೆ. 11 ಜನ ಸಾವನ್ನಪ್ಪಿದ್ದಾರೆ.