ಕರ್ನಾಟಕ

karnataka

ETV Bharat / bharat

ರಂಗೇರಿದ ವಿಧಾನಸಭಾ ಚುನಾವಣಾ ಕಣ; ರಾಹುಲ್ ಗಾಂಧಿ ವಿದೇಶ ಪ್ರಯಾಣ! - ಹರಿಯಾಣ

ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇರುವಾಗಲೇ ಕಾಂಗ್ರೆಸ್​ನ ಪ್ರಭಾವಿ ನಾಯಕ ವಿದೇಶಕ್ಕೆ ಪ್ರವಾಸ ಹೊರಟಿರುವುದು ಪಕ್ಷದಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ.

ಸಾಂದರ್ಭಿಕ ಚಿತ್ರ

By

Published : Oct 6, 2019, 12:48 PM IST

ನವದೆಹಲಿ:ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬ್ಯಾಂಕಾಕ್​ಗೆ ಪ್ರವಾಸ ಹೊರಟಿರುವುದು ಕಾಂಗ್ರೆಸ್​ ನಾಯಕರಲ್ಲಿ ದಿಗಿಲು ಮೂಡಿಸಿದೆ.

ಎರಡೂ ರಾಜ್ಯಗಳ ನಾಯಕರ ನಡುವೆ ಭಿನ್ನಮತ ಹೆಚ್ಚಾಗುತ್ತಿರುವುದರ ಮಧ್ಯೆ ರಾಹುಲ್​ ವಿದೇಶಕ್ಕೆ ಹಾರುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಹರಿಯಾಣ ಕಾಂಗ್ರೆಸ್​ ಘಟಕದ ಮಾಜಿ ಅಧ್ಯಕ್ಷ ಅಶೋಕ್​ ತನ್ವಾರ್​ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯವಾಗಿ ಬಹಳ ದೊಡ್ಡ ಹೊಡೆತ ಎಂದು ರಾಜಕೀಯ ಪಂಡಿತರು ವ್ಯಾಖ್ಯಾನಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ಸಂಜಯ್ ನಿರುಪಮ್​ ಸಹ ಚುನಾವಣಾ ಪ್ರಚಾರದಿಂದ ದೂರ ಉಳಿಯುವುದಾಗಿ ಬೆದರಿಕೆ ಹಾಕಿದ್ದಾರೆ.

ಚುನಾವಣೆ ನಡೆಯುತ್ತಿರುವ ಈ ರಾಜ್ಯಗಳ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳು, ಅಸಮಾಧಾನಗಳನ್ನು ಬಗೆಹರಿಸುವ ಬದಲು ವಿದೇಶಕ್ಕೆ ಹೋಗುತ್ತಿರುವುದು ಎಷ್ಟು ಸರಿಯೆಂದು ಪಕ್ಷದ ಮುಖಂಡರು ಪ್ರಶ್ನಿಸಲಾಗದೆ ಸದ್ಯ ಮೌನಕ್ಕೆ ಶರಣಾಗಿದ್ದಾರೆ.

ABOUT THE AUTHOR

...view details