ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್.. ಮಧ್ಯಾಹ್ನ ಆಯೋಗದಿಂದ ಸುದ್ದಿಗೋಷ್ಠಿ - ಕೇಂದ್ರ ಚುನಾವಣಾ ಆಯೋಗ

ಕೇಂದ್ರ ಚುನಾವಣಾ ಆಯೋಗ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಲಿದ್ದು, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.

ಕೇಂದ್ರ ಚುನಾವಣಾ ಆಯೋಗ

By

Published : Sep 21, 2019, 8:57 AM IST

ನವದೆಹಲಿ: ಮಧ್ಯಾಹ್ನ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದ್ದು, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.

ಜಾರ್ಖಂಡ್​ನಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಜೊತೆಯಲ್ಲಿ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುವುದಿಲ್ಲ. ಮೂಲಗಳ ಪ್ರಕಾರ ದೀಪಾವಳಿ ಹಬ್ಬಕ್ಕೂ ಮೊದಲೆ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಮೂರೂ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರ ನಡೆಸುತ್ತಿದ್ದು, ಜಾರ್ಖಂಡ್​ನಲ್ಲಿ ಮಾತ್ರ ಪೂರ್ಣ ಬಹುಮತ ಹೊಂದಿದೆ. ಲೋಕಸಭಾ ಚುನಾವಣೆ ನಂತರ ನಡೆಯತ್ತಿರುವ ವಿಧಾನಸಭೆ ಚುನಾವಣೆಗಳ ಮೇಲೆ ದೇಶದ ಜನರ ದೃಷ್ಟಿ ನೆಟ್ಟಿದೆ.

ABOUT THE AUTHOR

...view details