ಮುಂಬೈ/ಛತ್ತೀಸಗಢ:ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಪ್ರತಿಷ್ಠೆಯ ಕಣವಾಗಿದ್ದ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು, ಕಣಕ್ಕಿಳಿದಿದ್ದ ಅಭ್ಯರ್ಥಿಗಳ ಭವಿಷ್ಯ ಅಕ್ಟೋಬರ್ 24ರಂದು ಬಹಿರಂಗಗೊಳ್ಳಲಿದೆ.
288 ಕ್ಷೇತ್ರಗಳನ್ನೊಳಗೊಂಡ ಮಹಾರಾಷ್ಟ್ರದಲ್ಲಿ ಒಟ್ಟು 3,237 ಅಭ್ಯರ್ಥಿಗಳು ಹಾಗೂ 90 ಕ್ಷೇತ್ರಗಳನ್ನೊಳಗೊಂಡ ಹರಿಯಾಣದಲ್ಲಿ 1,169 ಅಭ್ಯರ್ಥಿಗಳು ತಮ್ಮ ಭವಿಷ್ಯ ನಿರ್ಧರಿಸಿಕೊಳ್ಳಲು ಚುನಾವಣಾ ಕಣಕ್ಕಿಳಿದಿದ್ದರು. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.
ಇನ್ನು ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ವಿವಿಧ ಸಮೀಕ್ಷೆಗಳು ಹೊರಬೀಳುತ್ತಿದ್ದು, ಇದೀಗ ಇಂಡಿಯಾ ಟುಡೇ, ಆಕ್ಸಿಸ್ ಮೈ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿದೆ. ಈ ಸಮೀಕ್ಷೆ ಪ್ರಕಾರ ಬಿಜೆಪಿ ಮೈತ್ರಿ 166-194 ಸೀಟು ಹಾಗೂ ಕಾಂಗ್ರೆಸ್-ಎನ್ಸಿಪಿ 70-90 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಲಿದೆ ಎಂದು ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ನಂಬರ್ 144 ಬೇಕು.
ಇನ್ನು ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ 240ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಲಿದ್ದು, ಬಿಜೆಪಿ 140, ಶಿವಸೇನೆ 102 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಲಿದೆ ಎಂದಿದೆ.
ಟೈಮ್ಸ್ ನೌ | ಬಿಜೆಪಿ ಮತ್ತು ಶಿವಸೇನೆ 230 | ಎನ್ಸಿಪಿ ಮತ್ತು ಕಾಂಗ್ರೆಸ್ 48 | ಇತರೆ 10 | |
ಜನ ಕೀ ಬಾತ್_ರಿಪಬ್ಲಿಕ್ | ಬಿಜೆಪಿ 135- 142 | ಶಿವಸೇನೆ 81- 88 | ಕಾಂಗ್ರೆಸ್ - 20-24 | ಎನ್ಸಿಪಿ 30- 35 |
ಸಿಎನ್ಎನ್ | ಬಿಜೆಪಿ - 141 | ಶಿವಸೇನೆ - 102 | ಕಾಂಗ್ರೆಸ್ - 41 | ಎನ್ಸಿಪಿ 04 |
ಹರಿಯಾಣ ಜನ ಕೀ ಬಾತ್ | ಬಿಜೆಪಿ 52- 63 | ಕಾಂಗ್ರೆಸ್- 15- 19 | ಐಎನ್ಎಲ್ಡಿ - 01 | ಇತರರು 12-18 |