ಮುಂಬೈ:ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನ ಮೈತ್ರಿಗೆ ಮತದಾರ ಅಧಿಕಾರ ನೀಡಿದ್ದರೂ, ಸದ್ಯ ಈ ಮೈತ್ರಿಯಲ್ಲಿ ಎಲ್ಲವೂ ಸರಿಯಲ್ಲ ಎನ್ನುವಂತಿದೆ ಪಕ್ಷದ ನಾಯಕರ ನಡೆ.
ಅಧಿಕಾರ ಹಂಚಿಕೆಯಲ್ಲಿ ಮೈತ್ರಿ ನಾಯಕರಲ್ಲಿ ಕೊಂಚ ಭಿನ್ನಾಭಿಪ್ರಾಯ ತಲೆದೋರಿದೆ ಎನ್ನಲಾಗಿದ್ದು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷದ ನಾಯಕರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.
ದಿವಾಕರ್ ರವೋತೆ ನೇತೃತ್ವದಲ್ಲಿ ಶಿವಸೇನೆ ನಿಯೋಗ ಇಂದು ಬೆಳಗ್ಗೆ ರಾಜ್ಯಾಪಲ ಭಗತ್ ಸಿಂಗ್ ಕೊಶ್ಯಾರಿಯನ್ನು ಭೇಟಿಯಾಗಿದ್ದಾರೆ. ಇದಾದ ಕೆಲ ಹೊತ್ತಲ್ಲಿ ಮಹಾರಾಷ್ಟ್ರ ನಿಯೋಜಿತ ಸಿಎಂ ದೇವೇಂದ್ರ ಫಡ್ನವೀಸ್ ರಾಜ್ಯಪಾಲರನ್ನು ಮೀಟ್ ಮಾಡಿದ್ದಾರೆ.