ಲಾತೂರ್:ಮಹಾರಾಷ್ಟ್ರದ 228 ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಪಕ್ಷಗಳು ಗೆಲುವಿನ ನಗೆ ಬೀರಿವೆ.
ಮಹಾ ಚುನಾವಣೆ: 'ನೋಟಾ' ಸೋಲಿಸಿದ ಕಾಂಗ್ರೆಸ್ನ ಮಾಜಿ ಸಿಎಂ ಪುತ್ರ... ಇತಿಹಾಸದಲ್ಲಿ ಇದೇ ಫಸ್ಟ್! - ಕಾಂಗ್ರೆಸ್
ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿನ ಲಾತೂರ್ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಧೀರಜ್ ದೇಶಮುಖ್ ಅವರಿಗೆ 'ನೋಟಾ'ಗಳು ಎರಡನೇ ಸ್ಪರ್ಧಿಯಾಗಿದೆ. ಧೀರಜ್ ದೇಶಮುಖ್ ಮಾಜಿ ಸಿಎಂ ವಿಲಾಸ್ರಾವ್ ದೇಶಮುಖ್ ಅವರ ಪುತ್ರರಾಗಿದ್ದು, 1,31,321 ಮತಗಳನ್ನು ಪಡೆದಿದ್ದಾರೆ.

ನೋಟಾಕ್ಕೆ (ಮೇಲಿನವರು ಯಾರೂ ಅಲ್ಲ) 27,287 ಮತಗಳು ಬಿದ್ದಿವೆ. ಶಿವಸೇನೆ ಮತ್ತು ಬಿಜೆಪಿಯ ಮೈತ್ರಿ ಅಭ್ಯರ್ಥಿಯು 13,113 ಮತಗಳು ಪಡೆದಿದ್ದು, 3ನೇ ಗರಿಷ್ಠ ಮತವಾಗಿದೆ. ಒಟ್ಟು 15 ಜನ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 14 ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಧೀರಜ್ ಅವರು ಗೆಲುವಿನ ಅಂತರ 1.5 ಲಕ್ಷ ಮತಗಳಿಷ್ಟಿದೆ.