ಮುಂಬೈ:ಐದು ವರ್ಷಗಳ ಆಡಳಿತ ನಡೆಸಿದ ದೇವೇಂದ್ರ ಫಡ್ನವೀಸ್ ಈ ಬಾರಿ ಶತಕ ಬಾರಿಸುವಲ್ಲಿ ಎಡವಿದ್ದಾರೆ. ತಮ್ಮ ಅಧಿಕಾರವಧಿಯ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ಬಿಜೆಪಿಗೆ ಮತದಾರ ಅಳೆದು ತೂಗಿ ಮತ ನೀಡಿದ್ದಾನೆ.
2014ರಲ್ಲಿ 122 ಕ್ಷೇತ್ರದಲ್ಲಿ ಸುಲಭವಾಗಿ ಗೆಲುವು ಪಡೆದಿದ್ದ ಬಿಜೆಪಿಗೆ ಗತಕಾಲದ ಮಿತ್ರ ಶಿವಸೇನೆ ಕೈಜೋಡಿಸಿತ್ತು. ಶಿವಸೇನೆ 63 ಸೀಟುಗಳನ್ನು ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಬಿಜೆಪಿ ಶತಕ ಸನಿಹದಲ್ಲಿ ಸುಸ್ತಾಗಿದೆ. 2014 ಕ್ಷೇತ್ರಕ್ಕಿಂತ ಹೆಚ್ಚಲ್ಲದಿದ್ದರೂ ಅಷ್ಟನ್ನು ಉಳಿಸಿಕೊಳ್ಳಲೂ ಆಡಳಿತ ಪಕ್ಷಕ್ಕೆ ಸಾಧ್ಯವಾಗಿಲ್ಲ.
ಸೆಂಚುರಿಗೂ ಮುನ್ನವೇ ಸುಸ್ತಾಗಲು ಕಾರಣವೇನು..?
ರೈತರ ಆತ್ಮಹತ್ಯೆಯ ರಿಂಗಣ:
ಮಹಾರಾಷ್ಟ್ರದಲ್ಲಿ ಫಡ್ನವೀಸ್ ಆಡಳಿತವನ್ನು ಒಂದು ಬಾರಿ ತೆರೆದು ನೋಡಿದರೆ ರೈತರ ಆತ್ಮಹತ್ಯೆ, ದೇಶದ ಬೆನ್ನಲುಬು ಎಂದೇ ಕರೆಸಿಕೊಳ್ಳುವ ರೈತರ ಸಮಸ್ಯೆ ಕಣ್ಣಿಗೆ ರಾಚುತ್ತದೆ. ಈ ಸಮಸ್ಯೆಯನ್ನು ಸರಿಪಡಿಸುವಲ್ಲಿ ಬಿಜೆಪಿ ಸರ್ಕಾರ ಸೋತಿದೆ ಎನ್ನುವುದು ಇಂದಿನ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
'ಮಹಾ' ಬಂಡಾಯದ ಬಿಸಿಗೆ ಕರಗುತ್ತಾ ಬಿಜೆಪಿ..?
ಫಡ್ನವೀಸ್ ಆಡಳಿತದಲ್ಲಿ ಸುಮಾರು 16,000 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ಎನ್ಸಿಪಿ ಮುಖಂಡ ಶರದ್ ಪವಾರ್ ಆರೋಪ. ಸಂಖ್ಯೆಗಳ ವಿಚಾರದಲ್ಲಿ ಕೊಂಚ ಏರುಪೇರಿದ್ದರೂ ರೈತರ ಆತ್ಮಹತ್ಯೆ ಚುನಾವಣೆ ವೇಳೆ ಹಿನ್ನಡೆಯಾಗಿತ್ತು. ಆದರೆ ಈ ವಿಚಾರವನ್ನು ಪ್ರಬಲವಾಗಿ ಮಂಡಿಸುವಲ್ಲಿ ವಿಪಕ್ಷ ಸೋತಿದ್ದು ಬಿಜೆಪಿಗೆ ಲಾಭವಾಗಿದೆ.
ಫಡ್ನವೀಸ್ ಸರ್ಕಾರ ರೈತರ ವಿಚಾರದ ಒಂದು ಹಂತಕ್ಕೆ ಸೋತಿದೆ ಎಂದು ಮತದಾರ ನಿರ್ಧರಿಸಿದ್ದರೂ ಅಧಿಕಾರವನ್ನು ಮಾತ್ರ ಬೇರೆ ಪಕ್ಷಕ್ಕೆ ಹಸ್ತಾಂತರಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಸಿಎಂ ಕ್ಷೇತ್ರದಲ್ಲೇ ಹೆಚ್ಚಾದ ಅಪರಾಧ ಪ್ರಕರಣ: