ಮುಂಬೈ (ಮಹಾರಾಷ್ಟ್ರ) : ರಾಜ್ಯದ ಸಿಎಂ ಸೇರಿದಂತೆ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಹಾಗೂ ಎಂಎಲ್ಸಿಗಳ ಮಾರ್ಚ್ ತಿಂಗಳ ಶೇ 60ರಷ್ಟು ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಮಹಾರಾಷ್ಟ್ರ ಡಿಸಿಎಂ ಹಾಗೂ ಹಣಕಾಸು ಸಚಿವ ಅಜಿತ್ ಪವಾರ್ ಈ ಕುರಿತಾಗಿ ಆದೇಶಿಸಿದ್ದು ಕೊರೊನಾ ವಿರುದ್ಧ ಹೋರಾಡಲು ಈ ಹಣವನ್ನು ಸರ್ಕಾರ ಬಳಸಿಕೊಳ್ಳುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ, ಸಚಿವರು, ಎಂಎಲ್ಎ ಸೇರಿ ಸರ್ಕಾರಿ ಆಫೀಸರ್ ಸಂಬಳಕ್ಕೆ ತೆಲಂಗಾಣ ಸರ್ಕಾರದ ಕತ್ತರಿ
ಜನಪ್ರತಿನಿಧಿಗಳು ಮಾತ್ರವಲ್ಲದೇ ರಾಜ್ಯದ ಎ ಹಾಗೂ ಬಿ ದರ್ಜೆಯ ಅಧಿಕಾರಿಗಳ ವೇತನದ ಶೇ 50ರಷ್ಟು ಹಾಗೂ ಸಿ ದರ್ಜೆಯ ನೌಕರರ ವೇತನದ ಶೇ 25ರಷ್ಟನ್ನು ಕಡಿತಗೊಳಿಸಲಾಗುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ಜೊತೆಗೆ ಡಿ ದರ್ಜೆಯ ನೌಕರರ ವೇತನದಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂದು ಈ ವೇಳೆ ಪವಾರ್ ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ತೆಲಂಗಾಣ ಸರ್ಕಾರ ತನ್ನ ನೌಕರರ ವೇತನವನ್ನು ಕಡಿತಗೊಳಿಸಿ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುವುದಾಗಿ ತಿಳಿಸಿತ್ತು. ಈಗ ಅದೇ ದಾರಿಯನ್ನು ಮಹಾರಾಷ್ಟ್ರ ಸರ್ಕಾರ ಅನುಸರಿಸುತ್ತಿದೆ.