ಮುಂಬೈ:ಮಹಾರಾಷ್ಟ್ರದಲ್ಲಿ ವರುಣನ ರುದ್ರನರ್ತನ ಮುಂದುವರೆದಿದೆ. ಆರ್ಭಟಿಸುತ್ತಿರುವ ಮಳೆಯಿಂದ ರತ್ನಗಿರಿ ಜಿಲ್ಲೆಯ ಚಿಪ್ಲನ್ನಲ್ಲಿರುವ ತಿವಾರಿ ಹೆಸರಿನ ಚಿಕ್ಕ ಡ್ಯಾಂ ಒಡೆದು, ಪ್ರವಾಹ ಉಂಟಾಗಿದೆ.
'ಮಹಾ' ಮಳೆಯ ರುದ್ರನರ್ತನ.. ಡ್ಯಾಂ ಒಡೆದು 7 ಗ್ರಾಮಗಳು ಜಲಾವೃತ, 24 ಮಂದಿ ಕಣ್ಮರೆ.. - undefined
ರತ್ನಗಿರಿ ಜಿಲ್ಲೆಯ ಚಿಪ್ಲನ್ನಲ್ಲಿರುವ ತಿವಾರಿ ಹೆಸರಿನ ಚಿಕ್ಕ ಡ್ಯಾಂ ಒಡೆದು ತಟದಲ್ಲಿರುವ 7 ಗ್ರಾಮಗಳಿಗೆ ನೀರು ನುಗ್ಗಿದೆ. ಈಗಾಗಲೇ 22-24 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್ಡಿಆರ್ಎಫ್ಗೆ ಇಬ್ಬರು ಪುರುಷರ ಮೃತದೇಹಗಳು ಸಹ ಪತ್ತೆಯಾಗಿವೆ. ಡ್ಯಾಂ ಬಳಿಯೇ ಇದ್ದ 12 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ.

ಡ್ಯಾಂ ತಟದಲ್ಲಿರುವ 7 ಗ್ರಾಮಗಳಿಗೆ ನೀರು ನುಗ್ಗಿದ್ದು, 22-24 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್ಡಿಆರ್ಎಫ್ಗೆ ಇಬ್ಬರು ಪುರುಷರ ಮೃತದೇಹಗಳು ಸಹ ಪತ್ತೆಯಾಗಿವೆ. ಡ್ಯಾಂ ಬಳಿಯೇ ಇದ್ದ 12 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ.
ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಎನ್ಡಿಆರ್ಎಫ್, ಸ್ಥಳೀಯ ಆಡಳಿತ, ಪೊಲೀಸರು ಹಾಗೂ ಸ್ವಯಂಸೇವಕರು ತಮ್ಮ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ.ಭಾನುವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈ ಸುತ್ತಮುತ್ತಲಿನ ಪ್ರದೇಶಗಳು ಅಕ್ಷರಶಃ ದ್ವೀಪದಂತಾಗಿವೆ. ಗೋಡೆ ಕುಸಿತ ಹಾಗೂ ಮಳೆ ಸಂಬಂಧಿ ಘಟನೆಗಳಿಂದಾಗಿ 36 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ರಸ್ತೆ, ರೈಲ್ವೆ ಹಾಗೂ ವಿಮಾನ ಸಂಚಾರ ಸಹ ಅಸ್ತವ್ಯಸ್ತಗೊಂಡಿದೆ. ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.