ಮುಂಬೈ:ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಉದ್ಧವ್ ಠಾಕ್ರೆ ಇಂದು ಹೊಸ ಸಚಿವ ಸಂಪುಟದೊಂದಿಗೆ ಮೊದಲ ಕ್ಯಾಬಿನೆಟ್ ಸಭೆ ನಡೆಸಿದರು. ಈ ವೇಳೆ ಛತ್ರಪತಿ ಶಿವಾಜಿ ರಾಜಧಾನಿ ರಾಯಗಡ್ ಅಭಿವೃದ್ಧಿಗಾಗಿ 20 ಕೋಟಿ ರೂ. ಘೋಷಣೆ ಮಾಡಿದ್ದಾರೆ.
ಠಾಕ್ರೆ ಮೊದಲ ಸಂಪುಟದಲ್ಲೇ ಶಿವಾಜಿ ರಾಜಧಾನಿ ಅಭಿವೃದ್ಧಿಗೆ 20 ಕೋಟಿ ರೂ. ಮಂಜೂರು
ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ನೂತನ ಸರ್ಕಾರ ಜಾರಿಗೆ ಬಂದಿದ್ದು, ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಥಮ ಸಚಿವ ಸಂಪುಟ ಸಭೆ ನಡೆಸಿದರು.
ಸಚಿವ ಸಂಪುಟದ ಬಳಿಕ ಮಾತನಾಡಿದ ಅವರು, ಈಗಾಗಲೇ ಅಧಿಕಾರಿಗಳಿಗೆ ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವೆಲ್ಲ ಯೋಜನೆಗಳಿವೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಲು ಕೇಳಿದ್ದೇನೆ. ಮುಂದಿನ ಎರಡು ದಿನಗಳಲ್ಲಿ ಅವು ನನ್ನ ಕೈಗೆ ಸಿಗಲಿದ್ದು, ತದನಂತರ ನಾನು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಇದೇ ವೇಳೆ ರೈತರಿಗೆ ನಾನು ಯಾವುದೇ ರೀತಿಯ ಸುಳ್ಳು ಭರವಸೆ ನೀಡುವುದಿಲ್ಲ ಎಂದು ಹೇಳಿರುವ ಅವರು, ಮಹತ್ವದ ಯೋಜನೆ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ನೀಡಿರುವ ಉದ್ಧವ್ ಠಾಕ್ರೆ, ಆಡಳಿತದುದ್ದಕ್ಕೂ ರೈತರ ಸಂತೋಷಕ್ಕಾಗಿ ಎಲ್ಲ ರೀತಿಯ ಯೋಜನೆ ಘೋಷಣೆ ಮಾಡಲು ಸಿದ್ಧನಾಗಿರುವೆ ಎಂದು ತಿಳಿಸಿದ್ದಾರೆ.