ಡೆಹ್ರಾಡೂನ್:288 ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ನಡೆದಿರುವ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದ್ದು, ಇದರ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೇದಾರೇಶ್ವರನ ಸನ್ನಿಧಿಯಲ್ಲಿ ಕಾಲ ಕಳೆದಿದ್ದಾರೆ.
ನಾಳೆ ಮಹಾರಾಷ್ಟ್ರ ಫಲಿತಾಂಶ... ಕೇದಾರೇಶ್ವರನ ಸನ್ನಿಧಿಯಲ್ಲಿ ಮಹಾರಾಷ್ಟ್ರ ಸಿಎಂ! - ಮಹಾ ಸಿಎಂ ದೇವೇಂದ್ರ ಫಡ್ನವೀಸ್
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದ್ದು, ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ - ಎನ್ಸಿಪಿ ನಡುವೆ ನೇರ ಸ್ಪರ್ಧೆ ಉಂಟಾಗಿದೆ. ಇದರ ಮಧ್ಯೆ ಮಹಾ ಸಿಎಂ ದೇವೇಂದ್ರ ಫಡ್ನವಿಸ್ ಉತ್ತರಾಖಂಡ್ನ ಕೇದಾರನಾಥ್ನ ಸನ್ನಿಧಿಯಲ್ಲಿ ಕಾಲಕಳೆಯುತ್ತಿದ್ದಾರೆ.
ಮಹಾರಾಷ್ಟ್ರ ಸಿಎಂ ಫಡ್ನವೀಸ್
ಮಹಾರಾಷ್ಟ್ರದಿಂದ ನೇರವಾಗಿ ವಿಮಾನದಲ್ಲಿ ಪತ್ನಿ ಅಮೃತಾ ಜತೆ ಕೇದಾರನಾಥನ ಸನ್ನಿಧಿ ತಲುಪಿದ ಫಡ್ನವಿಸ್, ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಲ್ಲಿನ ಮುಖ್ಯ ಅರ್ಚಕರ ಜತೆ ಮಹಾರಾಷ್ಟ್ರ ಸಿಎಂ ಕೆಲ ಹೊತ್ತು ಮಾತುಕತೆ ಸಹ ನಡೆಸಿದರು.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೂಡ ಎರಡು ದಿನಗಳ ಕಾಲ ಉತ್ತರಾಖಂಡ ಪ್ರವಾದಲ್ಲಿದ್ದಾಗ ಕೇದಾರನಾಥ್ನ ಸನ್ನಿಧಿಗೆ ಭೇಟಿ ನೀಡಿದ್ದರು. ಈಗಾಗಲೇ ಮಹಾರಾಷ್ಟ್ರ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿ-ಶಿವಸೇನೆ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ.