ಕರ್ನಾಟಕ

karnataka

ETV Bharat / bharat

ಕಾರ್ಟೂನ್​ ನೋಡಲು ಬಿಡದ ಕಾರಣ 14 ವರ್ಷದ ಬಾಲಕ ಆತ್ಮಹತ್ಯೆ! - ಕಾರ್ಟೂನ್​ ಶೋ

ಬಾಲಕ ಟಿವಿಯಲ್ಲಿ ಕಾರ್ಟೂನ್​ ನೋಡುತ್ತಿದ್ದ ಈ ವೇಳೆ ಆತನನ್ನ ಬೆದರಿಸಿರುವ ತಾಯಿ, ಅದನ್ನ ನೋಡದಂತೆ ಎಚ್ಚರಿಸಿದ್ದಾಳೆ​. ಅಜ್ಜಿ ಟಿವಿಯಲ್ಲಿ ನ್ಯೂಸ್​ ನೋಡಲು ಮುಂದಾಗಿದ್ದು, ಟಿವಿ ಆಫ್​ ಮಾಡಿದ್ದರಿಂದ ನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

boy committed suicide in Pune
boy committed suicide in Pune

By

Published : Jun 10, 2020, 3:50 PM IST

Updated : Jun 10, 2020, 3:55 PM IST

ಪುಣೆ: ಕಾರ್ಟೂನ್​ ಶೋ ನೋಡಲು ಬಿಡದಿದ್ದರಿಂದ ನೊಂದು 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪುಣೆಯ ಆದರ್ಶ ಚಾವ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲಕ ಟಿವಿಯಲ್ಲಿ ಕಾರ್ಟೂನ್​ ನೋಡುತ್ತಿದ್ದ ಈ ವೇಳೆ ಆತನನ್ನ ಬೆದರಿಸಿರುವ ತಾಯಿ, ಅದನ್ನ ನೋಡದಂತೆ ವಾರ್ನ್​ ಮಾಡಿದ್ದಾಳೆ​. ಜತೆಗೆ ಬಾಲಕನ ಅಜ್ಜಿ ಟಿವಿಯಲ್ಲಿ ನ್ಯೂಸ್​ ನೋಡಲು ಮುಂದಾಗಿದ್ದು, ಪರಸ್ಪರ ಜಗಳ ನಡೆದ ಕಾರಣ ಟಿವಿ ಆಫ್​ ಮಾಡಲಾಗಿದೆ. ಇದರಿಂದ ಮನ ನೊಂದ ಬಾಲಕ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯವರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸಾ ವೈಫಲ್ಯದಿಂದ ಆತ ಸಾವಿಗೀಡಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Jun 10, 2020, 3:55 PM IST

ABOUT THE AUTHOR

...view details