ನಾಗ್ಪುರ: ಕೊರೊನಾ ಸೋಂಕಿನಿಂದ ಇಡೀ ದೇಶ 21 ದಿನಗಳ ಕಾಲ ಲಾಕ್ಡೌನ್ನಲ್ಲಿದೆ. ಈ ಸಂದರ್ಭದಲ್ಲಿ ಮೂಕ ಪ್ರಾಣಿ, ಪಕ್ಷಿಗಳು ಕೂಡಾ ಆಹಾರ ಸಿಗದೆ ಪರದಾಡುವಂತಾಗಿದೆ.
ಎಲ್ಲೆಡೆ ಬಂದ್: ಬೀದಿನಾಯಿಗಳ ಪಾಡೇನು?: ಸಹೋದರಿಯರ ಮಾನವೀಯತೆ ನೋಡಿ.. - 21 ದಿನಗಳ ಕಾಲ ಲಾಕ್ಡೌನ್ ಘೋಷಣೆ
ನಾಗ್ಪುರದಲ್ಲಿ ಸಹೋದರಿಯರಿಬ್ಬರು ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಾನವೀಯತೆ ಮೆರೆದ ಸಹೋದರಿಯರು
ಪ್ರಾಣಿಗಳ ನೋವಿಗೆ ಮಿಡಿದ ನಾಗ್ಪುರದ ಸಹೋದರಿಯರಾದ ಕಾಜಲ್ ಮತ್ತು ದಿಶಾ ಎಂಬುವವರು ಬೀದಿ ನಾಯಿಗಳಿಗೆ ಆಹಾರ ಒದಗಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಎಲ್ಲಾ ಅಂಗಡಿಗಳು ಮುಚ್ಚಿವೆ, ಕೆಲವರು ಮಾತ್ರ ಮನೆಯಿಂದ ಹೊರಬರ್ತಿದ್ದಾರೆ. ಹೀಗಾಗಿ ನಾಯಿಗಳಿಗೆ ಆಹಾರ ನೀಡುವವರೇ ಇಲ್ಲದಂತಾಗಿದೆ. ಸದ್ಯ ಪ್ರಾಣಿಗಳು ಕಷ್ಟದ ಸಮಯವನ್ನು ಎದುರಿಸುತ್ತಿವೆ. ಈ ಸಮಯದಲ್ಲಿ ಅವುಗಳನ್ನು ಪೋಷಿಸುವುದು ನಮ್ಮ ಜವಾಬ್ದಾರಿ ಎಂದರು.