ಬೆಂಗಳೂರು/ಹೈದರಾಬಾದ್: ವಿಶೇಷ ಪ್ಯಾಕೇಜ್ ಪ್ರಕಟಣೆಯು ಪೂರೈಕೆಯ ಸಮಸ್ಯೆಗಳನ್ನು ಪರಿಹರಿಸಲಿದೆ. ಆದರೆ ಡಿಬಿಟಿ ಮತ್ತು ಇತರ ಪ್ರಕಟಣೆಗಳು ಸಾಕಷ್ಟಿರುವುದರಿಂದ ಬೇಡಿಕೆಯ ಕುರಿತು ಖಚಿತವಿಲ್ಲ ಎಂದು ಈಟಿವಿ ಭಾರತದ ಜೊತೆಗೆ ದೂರವಾಣಿ ಮೂಲಕ ಮಣಿಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್‌ದಾಸ್ ಪೈ ಹೇಳಿದರು.
ಹೆಚ್ಚುತ್ತಿರುವ ಸಾಲಗಳನ್ನು ಸುಧಾರಿಸಲು ಸುಮಾರು 4.5 ಲಕ್ಷ ಕೋಟಿ ಹೆಚ್ಚುವರಿ ಸಾಲಕ್ಕೆ ಅನುಮತಿ ನೀಡುವ ಮೂಲಕ ಕೇಂದ್ರವು ಹೊಸ ಸುಧಾರಣೆಗಳನ್ನು ತಂದಿದೆ. ಹೀಗಾಗಿ ದೊಡ್ಡ ಪ್ರಮಾಣದ ಸುಧಾರಣಾ ಕಾರ್ಯಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಭರವಸೆ ನೀಡಿದಂತೆ ಲ್ಯಾಂಡ್, ಲಿಕ್ವಿಡಿಟಿ, ಉದ್ಯೋಗ ಮತ್ತು ತಂತ್ರಜ್ಞಾನವನ್ನು ಬಳಸುವ ವ್ಯವಹಾರಗಳಲ್ಲಿ ಸುಧಾರಣೆ ತರಲು ಪ್ಯಾಕೇಜ್‌ನಲ್ಲಿ ಕೊಡುಗೆ ನೀಡಬಹುದು ಎಂದರು.