ಪಾಲ್ಘರ್ (ಮಹಾರಾಷ್ಟ್ರ) :ದನ ಮೇಯಿಸಲು ಹೋದ 16 ವರ್ಷದ ಬುಡಕಟ್ಟು ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ಜಿಲ್ಲೆ ಮನೋರ್ನಲ್ಲಿ ನಡೆದಿದೆ.
ದನ ಮೇಯಿಸಲು ಹೋದ ಬುಡಕಟ್ಟು ಬಾಲಕಿಯ ಅತ್ಯಾಚಾರ - ಪಾಲ್ಘರ್ನಲ್ಲಿ ಬುಡಕಟ್ಟು ಬಾಲಕಿಯ ಅತ್ಯಾಚಾರ
ಹಸುಗಳನ್ನು ಮೇಯಿಸಲು ಹೋದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದಿದೆ.
![ದನ ಮೇಯಿಸಲು ಹೋದ ಬುಡಕಟ್ಟು ಬಾಲಕಿಯ ಅತ್ಯಾಚಾರ Teenaged tribal girl raped in Palghar](https://etvbharatimages.akamaized.net/etvbharat/prod-images/768-512-9304638-908-9304638-1603607010025.jpg)
ಪಾಲ್ಘರ್ನಲ್ಲಿ ಬಾಲಕಿಯ ಅತ್ಯಾಚಾರ
ಅಕ್ಟೋಬರ್ 21 ರಂದು ಈ ಘಟನೆ ನಡೆದಿದೆ. ಬಾಲಕಿ ಜಾನುವಾರುಗಳನ್ನು ಮೇಯಿಸುತ್ತಾ ಹೊಲದಲ್ಲಿರುವಾಗ ಆಕೆಯನ್ನು ಪಕ್ಕದ ಪೊದೆಗೆ ಕರೆದೊಯ್ದು ಅತ್ಯಾಚಾರವೆಸಗಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಮೇಲೆ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.