ಕರ್ನಾಟಕ

karnataka

ETV Bharat / bharat

ಇಂಥಾ ಕ್ರೂರಿ ಮಗನೂ ಉಂಟೆ: ತಂದೆ ಕತ್ತನ್ನು ಕಚ್ಚಿ, ಖಾಸಗಿ ಭಾಗ ಕತ್ತಿರಿಸಿ ಕೊಂದ ಪುತ್ರ - ಕ್ರೂರಿ ಮಗ

ವಿಚಿತ್ರವಾಗಿ ವರ್ತಿಸುತ್ತಿದ್ದ ಮಗ ತನ್ನ ತಂದೆಯನ್ನೇ ಕ್ರೂರವಾಗಿ ಕೊಂದಿದ್ದಾನೆ. ಮೊದಲು ತಂದೆಯ ಕತ್ತನ್ನ ಬಲವಾಗಿ ಕಚ್ಚಿ, ನಂತರ ಆತನ ಖಾಸಗಿ ಭಾಗಗಗಳನ್ನು ಕತ್ತರಿಸಿದ್ದಾರೆ. ಈ ಹಿನ್ನೆಲೆ ಕ್ರೂರ ಮಗನಿಗೆ ತಂದೆ ಬಲಿಯಾಗಿದ್ದಾನೆ.

Maha man kills father brutally while mouthing film dialogues
ತಂದೆಯ ಕತ್ತನ್ನು ಕಚ್ಚಿದ್ದಲ್ಲದೆ, ಖಾಸಗಿ ಭಾಗ ಕತ್ತಿರಿಸಿ ಕೊಲೆ

By

Published : Apr 27, 2020, 9:24 AM IST

ನಾಗ್ಪುರ(ಮಹಾರಾಷ್ಟ್ರ):ಕ್ರೂರಿ ಮಗನೊಬ್ಬ ತನ್ನ ತಂದೆಯ ಕತ್ತನ್ನು ಕಚ್ಚಿ ಹಾಗೂ ಆತನ ಖಾಸಗಿ ಭಾಗಗಳನ್ನು ಕತ್ತರಿಸಿ ಬರ್ಬರವಾಗಿ ಕೊಂದಿದ್ದಾನೆ.

ನಗರದ ಹುಡ್ಕೇಶ್ವರ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. 25 ವರ್ಷದ ವಿಕ್ರಾಂತ್ ಪಿಲ್ಲೆವಾರ್ ಎನ್ನುವವ ತುಂಬಾ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದು, ತನ್ನ ಈ ವರ್ತನೆಗೆ ತಂದೆಯನ್ನೇ ಬಲಿಪಡೆದುಕೊಂಡಿದ್ದಾನೆ.

ಕುಟುಂಬದ ಪ್ರಕಾರ, ವಿಕ್ರಾಂತ್ ಯಾವುದೇ ಕಾರಣಗಳಿಲ್ಲದೆ ಈ ರೀತಿ ವರ್ತಿಸಲು ಮುಂದಾದನಂತೆ. ಅವನ ತಂದೆ ವಿಜಯ್‌ ಕುತ್ತಿಗೆಗೆ ಬಲವಾಗಿ ಕಚ್ಚಿದನು. ಆನಂತರ ವರಾಂಡಾಗೆ ಎಳೆದುಕೊಂಡು ಹೋಗಿ ಖಾಸಗಿ ಭಾಗಗಳನ್ನ ಕತ್ತಿರಿದನು ಎಂದು ಹೇಳಿದ್ದಾರೆ.

ವಿಕ್ರಾಂತ್​ ಜಿಮ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಘಟನೆಯ ಸಮಯದಲ್ಲಿ ಈತ ಹಿಂದಿ ಚಲನಚಿತ್ರದ ಸಂಭಾಷಣೆಗಳನ್ನು ಹೇಳುತ್ತಿದ್ದನಂತೆ. ಜೊತೆಗೆ ವಿಚಿತ್ರವಾದ ವರ್ತನೆ ತೋರುತ್ತಿದ್ದನಂತೆ. ಇನ್ನು ಈತ ತನ್ನ ತಂದೆಯನ್ನು ಕೊಲ್ಲುವಾಗ ಬಿಡಿಸಲು ಹೋದ ತಾಯಿ ಹಾಗೂ ಸಹೋದರಿಗೆ ಬೆದರಿಕೆ ಹಾಕಿ ಸುಮ್ಮನಿರಿಸಿದ್ದಾನೆ. ಈತನನ್ನು ಮನೆಯಿಂದ ಕೆಳಗಿಳಿಸಲು ಹಾಗೂ ಕಟ್ಟಿಹಾಕಲು ಐವರು ಪೊಲೀಸರು ಹರಸಾಹಸ ಪಡಬೇಕಾಯಿತು ಎಂದು ಹುಡ್ಕೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜ್‌ಕಮಲ್ ವಾಘಮರೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details