ಪಾಲ್ಗರ್(ಮಹಾರಾಷ್ಟ್ರ):22 ವರ್ಷದ ಕಾಮುಕನೋರ್ವನನ್ನ ಮೂರು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಮಹಾರಾಷ್ಟ್ರದ ಪಾಲ್ಗರ್ದಲ್ಲಿ ಈ ಘಟನೆ ನಡೆದಿದೆ.
ಮೂರು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ... ಕಾಮುಕನ ಬಂಧನ - ಮಹಾರಾಷ್ಟ್ರದ ಪಾಲ್ಗರ್ ಸುದ್ದಿ
ಮಹಾರಾಷ್ಟ್ರದ ಪಾಲ್ಗರ್ದಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಅಪ್ರಾಪ್ತೆ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿದ್ದಾನೆ.
ಬೀದಿ ವ್ಯಾಪಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ತಮ್ಮ ಮನೆ ಪಕ್ಕದಲ್ಲೇ ವಾಸವಾಗಿದ್ದ ಮೂರು ವರ್ಷದ ಬಾಲಕಿಯನ್ನ ನಿರ್ಜನ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದುಷ್ಕೃತ್ಯವೆಸಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃತ್ಯದ ಬಗ್ಗೆ ಅಪ್ರಾಪ್ತೆ ತನ್ನ ತಾಯಿ ಮುಂದೆ ಹೇಳಿಕೊಂಡಿದ್ದಾರೆ. ಇದರ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ಸೆಕ್ಷನ್ 376 (ರೇಪ್) ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಾಯ್ದೆ ಹಾಗೂ ಫೋಕ್ಸೋ ಅಡಿ ದೂರು ದಾಖಲು ಮಾಡಲಾಗಿದೆ. ಈಗಾಗಲೇ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 26ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.