ಮುಂಬೈ :ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರ ನಾಗ್ಪುರ ನಿವಾಸಕ್ಕೆ ಹೆಚ್ಚುವರಿ ಸುರಕ್ಷತೆ ನೀಡುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ 1.77 ಕೋಟಿ ರೂ. ಮೀಸಲಿಟ್ಟಿದೆ.
ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾದ ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಪೂರಕ ಬೇಡಿಕೆಗಳಲ್ಲಿ ಈ ನಿಬಂಧನೆ ಮಾಡಲಾಗಿದೆ. ಪೂರಕ ಬೇಡಿಕೆಗಳ ದಾಖಲೆಯಲ್ಲಿ ಇದಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸಲಾಗಿಲ್ಲ. ನಾಗ್ಪುರವು ಸಿಜೆಐ ಬೊಬ್ಡೆ ಅವರ ತವರೂರಾಗಿದೆ.
ರಾಜ್ ಭವನಂದ್ ನಿರ್ಮಾಣ ಮತ್ತು ಸಂಬಂಧಿತ ಕಾಮಗಾರಿಗಳಿಗಾಗಿ 5.75 ಕೋಟಿ ರೂ., ನ್ಯಾಯಾಧೀಶರ ವಸತಿಗೃಹ ಆವರಣದಲ್ಲಿ ನಿರ್ಮಾಣ ಮತ್ತು ಸಂಬಂಧಿತ ಕೆಲಸಗಳಿಗಾಗಿ 6.16 ಕೋಟಿ ರೂ.ಘೋಷಿಸಲಾಗಿದೆ. ಈ ವಿಷಯವಾಗಿ ರಾಜ್ಯ ಲೋಕೋಪಯೋಗಿ ಇಲಾಖೆ ಬೇಡಿಕೆ ಇಟ್ಟಿತ್ತು.
ಓದಿ:'ಅರ್ಹ ಆಯುಷ್ ವೈದ್ಯರಷ್ಟೇ ಕೋವಿಡ್‌ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಸೂಚಿಸಬಹುದು'
ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ 2,211 ಕೋಟಿ ರೂ. ಮತ್ತು ಕೋವಿಡ್-19 ಲಸಿಕೆ ಹವಾ ನಿಯಂತ್ರಣ ಸೌಲಭ್ಯಕ್ಕಾಗಿ 22 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಕೋವಿಡ್-19 ಹಿನ್ನೆಲೆ ರಾಜ್ಯದ 2ನೇ ರಾಜಧಾನಿಯಾದ ನಾಗ್ಪುರದಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ.