ಕರ್ನಾಟಕ

karnataka

ETV Bharat / bharat

'ಮುಂದಿನ ತಿಂಗಳು 'ಸೇನೆ' ಸರ್ಕಾರ ಅಸ್ತಿತ್ವಕ್ಕೆ, 2 ದಿನದಲ್ಲಿ ಸಂಪೂರ್ಣ ಚಿತ್ರಣ'.. ಸಂಜಯ್ ರಾವುತ್ - ಮಹಾರಾಷ್ಟ್ರ ಸರ್ಕಾರ ರಚನೆಯ ಸುದ್ದಿ.ಮಹಾರಾಷ್ಟ್ರ ಸರ್ಕಾರ ರಚನೆ

ಶಿವಸೇನೆ ನೇತೃತ್ವದ ಸರ್ಕಾರ ಮುಂದಿನ ತಿಂಗಳು ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎನ್ನುವ ವಿಶ್ವಾಸವನ್ನು ಶಿವಸೇನೆ ಸಂಸದ ಸಂಜಯ್ ರಾವುತ್ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ

By

Published : Nov 20, 2019, 4:25 PM IST

ಮುಂಬೈ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರು ನೀಡಿದ್ದ ಗಡುವಿನಲ್ಲಿ ಸರ್ಕಾರ ರಚನೆ ಅಸಾಧ್ಯವಾದ ಕಾರಣ ಈಗಾಗಲೇ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಹೀಗಿದ್ದರೂ ಸರ್ಕಾರ ರಚನೆಗೆ ಕನಸು, ಕಸರತ್ತು ಇನ್ನೂ ಜಾರಿಯಲ್ಲಿದೆ.

ಶಿವಸೇನೆಯ ಸಿದ್ಧಾಂತವನ್ನು ಸಂಪೂರ್ಣವಾಗಿ ಒಪ್ಪದ ಕಾಂಗ್ರೆಸ್ ಬಾಹ್ಯ ಬೆಂಬಲವನ್ನೂ ನೀಡಲಿಲ್ಲ. ಇದರ ನಡುವೆ ನಾವೇ ಮುಂದಿನ ತಿಂಗಳು ಸರ್ಕಾರ ರಚಿಸುತ್ತೇವೆ ಎಂದು ಶಿವಸೇನೆ ನಾಯಕ ಹೇಳಿದ್ದಾರೆ.

ಶಿವಸೇನೆಯ ಸರ್ಕಾರ ಮುಂದಿನ ತಿಂಗಳು ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎನ್ನುವ ವಿಶ್ವಾಸವನ್ನು ಶಿವಸೇನೆ ಸಂಸದ ಸಂಜಯ್ ರಾವುತ್ ವ್ಯಕ್ತಪಡಿಸಿದ್ದಾರೆ. ಈ ಬಗೆಗಿನ ಸಂಪೂರ್ಣ ಚಿತ್ರಣ ಇನ್ನೆರಡು ದಿನದಲ್ಲಿ ತಿಳಿದು ಬರಲಿದೆ ಎಂದೂ ಹೇಳಿದ್ದಾರೆ.

ಕಾಂಗ್ರೆಸ್ 'ನೋ ಕಮೆಂಟ್ಸ್'..!ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಹಾಗೂ ಸರ್ಕಾರ ರಚನೆ ಬಗ್ಗೆ ಸಂಸತ್ತಿನ ಹೊರಭಾಗದಲ್ಲಿ ಮಾಧ್ಯಮದ ಪ್ರಶ್ನೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.​

ABOUT THE AUTHOR

...view details