ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ರಾಜ್ಯ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಮಹಾರಾಷ್ಟ್ರ ಸಚಿವ ಸಂಪುಟ ಮತ್ತೊಮ್ಮೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಕೇಳಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಎಂಎಲ್‌ಸಿ ಮಾಡಿ: ರಾಜ್ಯಪಾಲರಿಗೆ ಮಹಾ ಸಚಿವ ಸಂಪುಟ ಪತ್ರ - ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಲೇಟೆಸ್ಟ್ ನ್ಯೂಸ್
ಸಾಂವಿಧಾನಿಕ ಬಿಕ್ಕಟ್ಟನ್ನು ತಪ್ಪಿಸಲು ಖಾಲಿ ಇರುವ ಎರಡು ವಿಧಾನ ಪರಿಷತ್ ಸ್ಥಾನಗಳಲ್ಲಿ ಒಂದಕ್ಕೆ, ಮಹಾರಾಷ್ಟ್ರ ಕ್ಯಾಬಿನೆಟ್ ಮತ್ತೊಮ್ಮೆ ಉದ್ಧವ್ ಠಾಕ್ರೆ ಹೆಸರನ್ನು ಶಿಫಾರಸು ಮಾಡಿದೆ.
ಉದ್ಧವ್ ಠಾಕ್ರೆಯನ್ನು ಎಂಎಲ್‌ಸಿ ಮಾಡಿ
ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಉದ್ಧವ್ ಠಾಕ್ರೆ ಅವರನ್ನು ರಾಜ್ಯ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಕಳುಹಿಸಿದ ಎರಡನೇ ಶಿಫಾರಸು ಇದಾಗಿದೆ.
ಇದಕ್ಕೂ ಮುನ್ನ ರಾಜ್ಯ ಸಚಿವ ಸಂಪುಟ, ಏಪ್ರಿಲ್ 9 ರಂದು ಖಾಲಿ ಇರುವ ಎರಡು ಎಂಎಲ್‌ಸಿ ಸ್ಥಾನಗಳಲ್ಲಿ ಒಂದಕ್ಕೆ ಠಾಕ್ರೆ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಕಳೆದ ವರ್ಷ ನವೆಂಬರ್ 28 ರಂದು ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರು ಪ್ರಸ್ತುತ ಶಾಸಕಾಂಗ ಅಥವಾ ವಿಧಾನ ಪರಿಷತ್ತಿನ ಸದ್ಯರಾಗಿಲ್ಲ.