ಮುಂಬೈ:ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಹಥ್ರಾಸ್ಗೆ ತೆರಳುವಾಗ ದೆಹಲಿ-ಯುಪಿ ಗಡಿಯಲ್ಲಿ ಅವರನ್ನು ತಡೆದ ಪೊಲೀಸರಲ್ಲಿ ಒಬ್ಬರು ಪ್ರಿಯಾಂಕಾ ಬಟ್ಟೆ ಹಿಡಿದುಕೊಂಡಿದ್ದು, ಇದರ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷೆ ಚಿತ್ರ ವಾಘ್ ಒತ್ತಾಯಿಸಿದ್ದಾರೆ.
ವಾಘ್ ಅವರ ನಿಲುವನ್ನು ಕಾಂಗ್ರೆಸ್ ನಾಯಕರು ಕೂಡ ಬೆಂಬಲಿಸಿದ್ದು, ಅವರು ಕಳೆದ ವರ್ಷ ಕೇಸರಿ ಪಾಳಯ ಸೇರಿದ್ದರೂ ತಮ್ಮ ಸಂಸ್ಕಾರವನ್ನು ಮರೆತಿಲ್ಲ ಎಂದು ಹೇಳಿದ್ದಾರೆ.
ಹಥ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರದ ಬಳಿಕ ಮೃತಪಟ್ಟ ಮಹಿಳೆಯ ಕುಟುಂಬವನ್ನು ಭೇಟಿ ಮಾಡಲು ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಶನಿವಾರ ಮಧ್ಯಾಹ್ನ ದೆಹಲಿ-ಯುಪಿ ಗಡಿಗೆ ತಲುಪಿದ್ದರು.
ಈ ಸಂದರ್ಭ ಅವರನ್ನು ಪೊಲೀಸರು ತಡೆದಿದ್ದರು. ಹೆಲ್ಮೆಟ್ ಧರಿಸಿದ ಪೊಲೀಸರೊಬ್ಬರು ಪಬ್ಬರು ಡಿಎನ್ಡಿ ಟೋಲ್ ಪ್ಲಾಜಾದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕುರ್ತಾದಿಂದ ಹಿಡಿದಿದ್ದರು.