ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಒಟ್ಟು 96 ಪೊಲೀಸ್ ಸಿಬ್ಬಂದಿಗೆ ಕೊರೊನಾ... ಇಂದು ಓರ್ವ ಹೆಡ್​ ಕಾನ್​​ಸ್ಟೇಬಲ್​ ಸಾವು - ಮಹಾರಾಷ್ಟ್ರದಲ್ಲಿ ಒಟ್ಟು 96 ಪೊಲೀಸ್ ಸಿಬ್ಬಂದಿಗೆ ಕೊರೊನಾ

ಮಹಾರಾಷ್ಟ್ರದಲ್ಲಿ 15 ಅಧಿಕಾರಿಗಳು ಸೇರಿ ಈವರೆಗೆ 96 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ ಏಳು ಮಂದಿ ಗುಣಮುಖರಾಗಿದ್ದಾರೆ. ಆದ್ರೆ ಇಂದು ಓರ್ವ ಹೆಡ್​ ಕಾನ್​

96 police personnel infected by corona in Maharastra
ಮಹಾರಾಷ್ಟ್ರದಲ್ಲಿ ಒಟ್ಟು 96 ಪೊಲೀಸ್ ಸಿಬ್ಬಂದಿಗೆ ಕೊರೊನಾ

By

Published : Apr 25, 2020, 8:59 PM IST

ಮುಂಬೈ: ಲಾಕ್​ಡೌನ್​ ಅವಧಿಯಲ್ಲಿ ಕರ್ತವ್ಯದಲ್ಲಿದ್ದ 15 ಅಧಿಕಾರಿಗಳು ಸೇರಿ ಮಹಾರಾಷ್ಟ್ರದಲ್ಲಿ ಈವರೆಗೆ 96 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕಿತ ಪೊಲೀಸರ ಪೈಕಿ ಮೂವರು ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಸೇರಿ ಒಟ್ಟು ಏಳು ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ 57 ವರ್ಷದ ಹೆಡ್​ ಕಾನ್​​ಸ್ಟೇಬಲ್​ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ ಸಂಬಂಧ ಮಾರ್ಚ್ 22 ರಿಂದ ಈವರೆಗೆ ಒಟ್ಟು 69,374 ಕೇಸ್​ಗಳನ್ನು ದಾಖಲಿಸಿರುವ ಪೊಲೀಸರು, 4,955 ಜನರ ಬಂಧಿಸಿದ್ದು, 47,168 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದಕ್ಕೆ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಸಂಬಂಧ 147 ಪ್ರಕರಣಗಳು ದಾಖಲಾಗಿದ್ದು, 477 ಮಂದಿಯನ್ನು ಬಂಧಿಸಲಾಗಿದೆ.

ಇನ್ನು, ಕ್ವಾರಂಟೈನ್​ ನಿಯಮ ಉಲ್ಲಂಘಿಸಿದ 602 ಮಂದಿಯನ್ನು ಪತ್ತೆ ಮಾಡಿ ಮತ್ತೆ ಅವರನ್ನು ಐಸೋಲೇಷನ್​ನಲ್ಲಿರಿಸಲಾಗಿದೆ. ಅಕ್ರಮ ಸಾಗಾಟ ಸಂಬಂಧ 1,084 ಕೇಸ್​ಗಳು ಹಾಗೂ 47,168 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಇವರೆಲ್ಲರಿಂದ ಈಗ ಜನರಿಗೆ ರಕ್ಷಣೆ ನೀಡುವ ಆರಕ್ಷಕರಿಗೇ ಮಹಾಮಾರಿ ಅಂಟಿದಂತಾಗಿದೆ.

For All Latest Updates

ABOUT THE AUTHOR

...view details