ಮಧುರೈ(ತಮಿಳುನಾಡು): ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ದೇಶದ ಸ್ಚಚ್ಛ ಪವಿತ್ರ ಸ್ಥಳಗಳನ್ನು ಗುರುತಿಸುತ್ತಿದೆ. ಈ ವರ್ಷವೂ ಮಧುರೈ ಮೀನಾಕ್ಷಿ ಅಮ್ಮನ ದೇಗುಲವು ಸತತ ಎರಡನೇ ಬಾರಿಗೆ ಸ್ವಚ್ಛ ಸಾಂಪ್ರದಾಯಿಕ ಸ್ಥಳ ಪ್ರಶಸ್ತಿ ಗೆದ್ದುಕೊಂಡಿದೆ.
ಕೇಂದ್ರ ಸರ್ಕಾರವು ದೇಶದ ಪ್ರಮುಖ ಹತ್ತು ಪವಿತ್ರ ಸ್ಥಳಗಳಿಗೆ ಈ ಪ್ರಶಸ್ತಿನ್ನು ನೀಡುತ್ತಿದ್ದು, ಕಳೆದ ವರ್ಷವೂ ಮೀನಾಕ್ಷಿ ಅಮ್ಮನ ದೇಗುಲ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಎರಡನೇ ಸ್ವಚ್ಛ ಸಾಂಪ್ರದಾಯಿಕ ಸ್ಥಳ ಪ್ರಶಸ್ತಿ ಗೆಲ್ಲುವ ಮೂಲಕ ಮತ್ತೊಮ್ಮೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.