ಕರ್ನಾಟಕ

karnataka

ETV Bharat / bharat

ಸಿಎಎ ವಿರೋಧಿ ಪ್ರತಿಭಟನೆಗಳ ವಿಡಿಯೋ ಮಾಡುವಂತೆ ಮದ್ರಾಸ್​ ಹೈಕೋರ್ಟ್​ ಆದೇಶ - ಚೆನ್ನೈ ಇಶೇಷ ನ್ಯಾಯಾಲಯ

ಡಿಎಂಕೆ ಹಾಗು ಕಾಂಗ್ರೆಸ್​​ ಪಕ್ಷದಿಂದ ಇಂದು ಸಿಎಎ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯ ವಿಡಿಯೋ ಚಿತ್ರೀಕರಿಸುವಂತೆ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಮದ್ರಾಸ್​ ಹೈಕೋರ್ಟ್​ ಆದೇಶಿಸಿದೆ.

Madras HC
ಚೆನ್ನೈ ಹೈಕೋರ್ಟ್​

By

Published : Dec 23, 2019, 9:55 AM IST

ಚೆನ್ನೈ(ತಮಿಳುನಾಡು):ಪೊಲೀಸ್​​ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ನಡೆಸುವ ರ್ಯಾಲಿಗಳ ಬಗ್ಗೆ ಪೊಲೀಸರು ಹದ್ದಿನ ಕಣ್ಣಿಡಬೇಕು ಹಾಗೂ ಆ ರ್ಯಾಲಿಗಳ ವಿಡಿಯೋ ಚಿತ್ರೀಕರಣವನ್ನು ಡ್ರೋನ್​ ಮೂಲಕ ಮಾಡಬೇಕೆಂದು ಪೊಲೀಸ್​ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮದ್ರಾಸ್​ ಹೈಕೋರ್ಟ್​ ಆದೇಶ ನೀಡಿದೆ.

ಡಿಎಂಕೆ ಹಾಗೂ ಕಾಂಗ್ರೆಸ್​​ ಪಕ್ಷ ಇಂದು ಸಿಎಎ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆ, ಸಾರ್ವಜನಿಕ ಹಿತಾಸಕ್ತಿಯಡಿ ಮಕ್ಕಲ್​ ಮಂದಿರಂ ಅಧ್ಯಕ್ಷ ವರಾಗು ಅರ್ಜಿ ಸಲ್ಲಿಸಿದ್ದರು. ಈ ಪ್ರತಿಭಟನೆ ಕಾನೂನು ಬಾಹಿರವಾಗಿದ್ದಾಗಿದೆ, ಇದರಿಂದಾಗಿ ಸಾರ್ವಜನಿಕ ಸುವ್ಯವಸ್ಥೆ ಹದಗೆಡಲಿದ್ದು, ಜನಸಾಮಾನ್ಯರ ಜೀವನಕ್ಕೆ ಅಪಾಯನ್ನುಂಟು ಮಾಡುತ್ತದೆ ಎಂದು ಅವರು ದೂರಿದ್ದರು.

ಸಿಎಎ ವಿರೋಧಿ ಪ್ರತಿಭಟನೆಗಳ ವಿಡಿಯೋ ಚಿತ್ರೀಕರಣಕ್ಕೆ ಮದ್ರಾಸ್​ ಹೈಕೋರ್ಟ್​ ಆದೇಶ

ಈ ಬಗ್ಗೆ ಭಾನುವಾರ ಸಂಜೆ ವಾದ- ಪ್ರತಿವಾದ ಆಲಿಸಿದ ಜಸ್ಟಿಸ್​ ಎಸ್​​.ವೈದ್ಯನಾಥ್​ ಹಾಗೂ ಪಿ.ಟಿ. ಆಶಾ ಅವರು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ತಡೆಯಲು ಸಾಧ್ಯವಿಲ್ಲ. ಆದ್ರೆ ಪ್ರತಿಭಟನೆಗಳು ಶಾಂತಿಯುತವಾಗಿರಬೇಕು ಎಂದಿದ್ದಾರೆ.

ಇನ್ನು ಮದ್ರಾಸ್​ ಹೈಕೋರ್ಟ್​ ಪೊಲೀಸ್​​ ಇಲಾಖೆಗೆ ಈ ಕುರಿತು ಆದೇಶ ನೀಡಿದ್ದು, ಈ ಜಾಥಾ ಯಾವುದೇ ಹಿಂಸಾಚಾರವನ್ನು ಒಳಗೊಂಡಿರಬಾದು ಹಾಗೂ ಅನುಮತಿ ಪಡೆಯದೆ ರ್ಯಾಲಿಗಳ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುವಂತೆ ಹೇಳಿದೆ.

ABOUT THE AUTHOR

...view details