ಚೆನ್ನೈ:ವ್ಯಕ್ತಿಯ ಖಾಸಗಿತನದ ಹರಣ, ಅಶ್ಲೀಲ ವಿಡಿಯೋಗಳಿರುವ ಕಾರಣ ಟಿಕ್ಟಾಕ್ ಆ್ಯಪ್ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಟಿಕ್ಟಾಕ್ನಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ವಿಚಾರಗಳು, ಅಶ್ಲೀಲ ಸಂದೇಶಗಳು, ವೈಯಕ್ತಿಕ ನಿಂದನೆ ಹಾಗೂ ಅಪ್ರಾಪ್ತ ವಯಸ್ಕರರಿಗೆ ಧಕ್ಕೆ ತರುವಂತಹ ವಿಡಿಯೋಗಳು ಲಭ್ಯವಿರುವ ಕಾರಣ ಕೂಡಲೇ ಆ್ಯಪ್ಅನ್ನು ನಿಷೇಧಿಸಬೇಕು ಎಂದು ಕೋರ್ಟ್ ಹೇಳಿದೆ.
ಅಲ್ಲದೇ ಮಾಧ್ಯಮಗಳು ಟಿಕ್ ಟಾಕ್ನಲ್ಲಿರುವ ವಿಡಿಯೋಗಳನ್ನು ಪ್ರಸಾರ ಮಾಡಬಾರದು ಕೋರ್ಟ್ ಖಡಕ್ಕಾಗಿ ಸೂಚನೆ ನೀಡಿದೆ.
ಆ್ಯಪ್ ನಿಷೇಧಿಸುವಂತೆ ಮಧುರೈ ಮೂಲದ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತರೂ ಆದ ಮುತ್ತುಕುಮಾರ್ ಎಂಬುವರು ಮದ್ರಾಸ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಇದಕ್ಕೂ ಮೊದಲು ಫೆಬ್ರವರಿಯಲ್ಲಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯ ಶಾಸಕ ತಮೀಮುನ್ ಅನ್ಸಾರಿ ಅವರು ಟಿಕ್ ಟಾಕ್ಅನ್ನು ರಾಜ್ಯದಲ್ಲಿ ನಿರ್ಬಂಧಿಸುವಂತೆ ವಿಧಾನಸಭೆಯಲ್ಲೇ ಒತ್ತಾಯಿಸಿದ್ದರು.