ಗ್ವಾಲಿಯರ್ (ಮಧ್ಯಪ್ರದೇಶ):ಪತಿಯೊಬ್ಬಪರೀಕ್ಷೆಗೋಸ್ಕರ ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಜಾರ್ಖಂಡ್ನಿಂದ ಗ್ವಾಲಿಯರ್ವರೆಗೆ ಬರೋಬ್ಬರಿ 1,150 ಕಿಲೋ ಮೀಟರ್ ಸ್ಕೂಟರ್ ಮೇಲೆ ಕರೆದುಕೊಂಡು ಹೋಗಿ ಸುದ್ದಿಯಾಗಿದ್ದಾನೆ.
27 ವರ್ಷದ ಧನಂಜಯ ಅಡುಗೆ ಕೆಲಸಗಾರನಾಗಿದ್ದು, ಲಾಕ್ಡೌನ್ ಕಾರಣ ಕೆಲಸ ಕಳೆದುಕೊಂಡಿದ್ದಾನೆ. ಈತನ ಪತ್ನಿ 22 ವರ್ಷದ ಸೋನಿ ಹೆಂಬ್ರಮ್ ಡಿ.ಎಡ್ ಪರೀಕ್ಷೆ ಬರೆಯಲು ದ್ವಿಚಕ್ರ ವಾಹನದಲ್ಲೇ ಪ್ರಯಾಣಿಸಿದ್ದಾರೆ. ಜಾರ್ಖಂಡ್ನ ಗೊಡ್ಡ ಜಿಲ್ಲೆಯ ಗಂಟಾತೊಲ ಹಳ್ಳಿಯಿಂದ ಗ್ವಾಲಿಯರ್ವರೆಗೆ ಇವರು ಸ್ಕೂಟರ್ನಲ್ಲಿ ಪ್ರಯಾಣಿಸಿದ್ದಾರೆ. ಆರಂಭದಲ್ಲಿ ಪತ್ನಿ ಸ್ಕೂಟರ್ ಮೇಲೆ ತೆರಳಲು ನಿರಾಕರಿಸಿದ್ದಾಳೆ ಆದರೆ ಗಂಡನ ಮಾತಿಗೆ ಒಪ್ಪಿಕೊಂಡು ಆತನೊಂದಿಗೆ ತೆರಳಲು ಸಿದ್ಧಗೊಂಡಿದ್ದಾಳೆ. ಆಗಸ್ಟ್ 28ರಂದು ಹೊರಟ ಇವರು ಮಳೆ, ಬಿಸಿಲು ಲೆಕ್ಕಿಸದೇ ನಾಲ್ಕು ರಾಜ್ಯ ದಾಟಿ ಆಗಸ್ಟ್ 30ರಂದು ಗ್ವಾಲಿಯರ್ ತಲುಪಿದ್ದಾರೆ. ಜತೆಗೆ ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುವಲ್ಲಿ ಗಂಡ ಧನಂಜಯ್ ಯಶಸ್ವಿಯಾಗಿದ್ದಾನೆ.