ಕರ್ನಾಟಕ

karnataka

ETV Bharat / bharat

ಮಹಿಳಾ ಪೊಲೀಸ್​ ಪೇದೆ ಕಿಡ್ನಾಪ್​​ & ರೇಪ್​... ಆರು ಕಾಮುಕರ ವಿರುದ್ಧ ದೂರು ದಾಖಲು - ಕಾಮುಕರ ವಿರುದ್ಧ ದೂರು ದಾಖಲು

ಮಧ್ಯಪ್ರದೇಶದ ಮಹಿಳಾ ಕಾನ್ಸ್​ಟೇಬಲ್​ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಕಾಮುಕರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

Madhya Pradesh
Madhya Pradesh

By

Published : Jan 26, 2020, 6:21 AM IST

ಭೋಪಾಲ್​​:ಪೊಲೀಸ್​​ ಮಹಿಳಾ ಕಾನ್ಸ್​ಟೇಬಲ್​ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್​​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಡಿಸೆಂಬರ್​ 27ರಂದು ಮಧ್ಯಪ್ರದೇಶದ ಕಂಪೂ ಎಂಬಲ್ಲಿ ಮಹಿಳಾ ಪೊಲೀಸ್​ ಪೇದೆ ಅಪಹರಣ ಮಾಡಿದ್ದ ಕಾಮುಕರ ಗುಂಪು ತದನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಿನ್ನೆ ಪೊಲೀಸ್​ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಗೆ ಬರುತ್ತಿದ್ದ ವೇಳೆ ಕಾಮುಕರ ಗುಂಪು ಆಕೆಯನ್ನ ಅಡ್ಡಗಟ್ಟಿ ಈ ಕೃತ್ಯವೆಸಗಿದ್ದರು.

ABOUT THE AUTHOR

...view details