ಇಂದೋರ್(ಮಧ್ಯಪ್ರದೇಶ): ಮದುವೆಯಾಗುವುದಾಗಿ ನಂಬಿಸಿ ತನ್ನ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ ಪ್ರಕರಣ ದಾಖಲು ಮಾಡಿದ್ದಾಳೆ.
ಕೆಲಸ ಕೊಟ್ಟ ಮಾಲೀಕಳ ಮೇಲೆ ಲೈಂಗಿಕ ದೌರ್ಜನ್ಯ: ಪ್ರಕರಣ ದಾಖಲಿಸಿದ ಮಹಿಳೆ! - ರೇನು ಮಿತ್ತಲ್ ಛತ್ತೀಸ್ಘಡ
ತನ್ನ ಪ್ಯಾಕ್ಟರಿಯಲ್ಲಿ ಕೆಲಸ ನೀಡಿದ್ದ ಉದ್ಯೋಗಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಇದೀಗ ಪರಾರಿಯಾಗಿದ್ದಾನೆಂದು ಮಹಿಳೆ ಪ್ರಕರಣ ದಾಖಲು ಮಾಡಿದ್ದಾಳೆ.
ರೇನು ಮಿತ್ತಲ್ ಛತ್ತೀಸ್ಗಢದಲ್ಲಿ ಸ್ಟೀಲ್ ಪ್ಯಾಕ್ಟರಿ ಮಾಲೀಕೆಯಾಗಿದ್ದು, 2016ರಲ್ಲಿ ವಿಜಯ್ ಗಲ್ಗಟ್ ಎಂಬ ವ್ಯಕ್ತಿಗೆ ತನ್ನ ಪ್ಯಾಕ್ಟರಿಯಲ್ಲಿ ಕೆಲಸ ನೀಡುತ್ತಾಳೆ. ಇದಾದ ಬಳಿಕ ಇಬ್ಬರೂ ಒಟ್ಟಿಗೆ ಉಳಿದುಕೊಂಡಿರುತ್ತಾರೆ. ಆದರೆ ಇದೀಗ ಕಳೆದ ಕೆಲ ದಿನಗಳ ಹಿಂದೆ ತನ್ನನ್ನು ಬಿಟ್ಟು ಆತ ಮಧ್ಯಪ್ರದೇಶಕ್ಕೆ ವಾಪಸ್ ಹೋಗಿದ್ದು, ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನೆ ಎಂದು ಹೇಳಿದ್ದಾಗಿ ಆರೋಪಿಸಿದ್ದಾಳೆ. ಇದರ ಜತೆಗೆ ವಿಜಯ್ ಕುಟುಂಬಸ್ಥರು ತನ್ನನ್ನ 5 ಲಕ್ಷ ರೂಪಾಯಿಗೆ ಪುಣೆಯ ವ್ಯಕ್ತಿಗೆ ಮಾರಲು ಪ್ರಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಮೊನಿಕಾ ಶುಕ್ಲಾ ಮಹಿಳೆ ಪ್ರಕರಣ ದಾಖಲು ಮಾಡಿದ್ದು, ಅದರ ಪ್ರಕಾರ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.