ಧುಲೆ (ಮಹಾರಾಷ್ಟ್ರ):ಜಿಲ್ಲೆಯ ಬಿನ್ಚುನ್ ಗ್ರಾಮದಲ್ಲಿರುವ ಭೋರಿ ನದಿ ಮೇಲೆ ಸಾಗುತ್ತಿದ್ದ ಪಿಕ್ಅಪ್ ವಾಹನ ಭೀಕರ ಅಪಘಾತಕ್ಕೀಡಾಗಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ 7 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 20 ಮಂದಿ ಗಂಭೀರವಾಗಿ ಗೊಂಡಿದ್ದು, ಅವರನ್ನೆಲ್ಲ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೀಕರ ಅಪಘಾತಕ್ಕೆ 7 ಮಂದಿ ಬಲಿ: 20 ಜನರ ಸ್ಥಿತಿ ಚಿಂತಾಜನಕ - ಮಧ್ಯಪ್ರದೇಶ ಮಂದಿಗೆ ಮಹಾರಾಷ್ಟ್ರದಲ್ಲಿ ಅಪಘಾತ
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಬಿನ್ಚುನ್ ಗ್ರಾಮದಲ್ಲಿರುವ ಭೋರಿ ನದಿ ಮೇಲೆ ಸಾಗುತ್ತಿದ್ದ ಪಿಕ್ಅಪ್ ವಾಹನ ಭೀಕರ ಅಪಘಾತಕ್ಕೀಡಾಗಿದ್ದು, 7 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
![ಭೀಕರ ಅಪಘಾತಕ್ಕೆ 7 ಮಂದಿ ಬಲಿ: 20 ಜನರ ಸ್ಥಿತಿ ಚಿಂತಾಜನಕ Madhya pradesh residents accident, ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ](https://etvbharatimages.akamaized.net/etvbharat/prod-images/768-512-5222075-thumbnail-3x2-hjgyujhgkcollage.jpg)
ಮಹಾರಾಷ್ಟ್ರದಲ್ಲಿ ಭೀಕರ ಅಪಘಾತಕ್ಕೀಡಾದ ಮಧ್ಯಪ್ರದೇಶ ಮಂದಿ: 7 ಮಂದಿ ಮೃತ, 20 ಜನ ಗಂಭೀರ
ಅಪಘಾತವು ತಡರಾತ್ರಿ 1 ಗಂಟೆಗೆ ನಡೆದಿದ್ದು, ಅಪಘಾತಕ್ಕೀಡಾಗಿರುವ ಅಷ್ಟೂ ಮಂದಿ ಮಧ್ಯಪ್ರದೇಶದ ನಿವಾಸಿಗಳಾಗಿದ್ದಾರೆ. ಅವರು ಕಬ್ಬು ಕಟಾವು ಮಾಡಲೆಂದು ಪರಿವಾರ ಸಮೇತ ಗುಳೆ ಬಂದಿದ್ದರು ಎನ್ನಲಾಗಿದೆ. ಇನ್ನೂ ಅಪಘಾತದಲ್ಲಿ ಮೃತಪಟ್ಟಿರುವವರಲ್ಲಿ ಹೆಚ್ಚಿನವರು ಮಕ್ಕಳು ಎಂದು ತಿಳಿದು ಬಂದಿದೆ.
ತಕ್ಷಣವೇ ಘಟಾನಾ ಸ್ಥಳಕ್ಕೆ ತುರ್ತು ವಾಹನ ತಲುಪಿದ್ದು, 108 ನ ಚಾಲಕ ಖುದ್ದು ನೀರಿಗೆ ಧುಮುಕಿ ನೀರಿಗೆ ಬಿದ್ದವರನ್ನು ರಕ್ಷಣೆ ಮಾಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.