ಕರ್ನಾಟಕ

karnataka

ETV Bharat / bharat

ಬಿಗ್​ ಶಾಕಿಂಗ್​....   6 ಸಾವಿರ ಸಂಬಳ ಪಡೆಯುವ ವ್ಯಕ್ತಿಗೆ ಕೋಟಿ ಕೋಟಿ ತೆರಿಗೆ ಕಟ್ಟುವಂತೆ ನೋಟಿಸ್! - ಭಾರಿ ತೆರಿಗೆ ವಿಧಿಸಿದ ಐಟಿ ಇಲಾಖೆ

ತಿಂಗಳಿಗೆ 6 ಸಾವಿರ ವೇತನ ಪಡೆಯುತ್ತಿದ್ದ ವ್ಯಕ್ತಿಗೆ ಐಟಿ ಇಲಾಖೆ 3.49 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್​ ನೀಡಿ ಶಾಕ್ ಕೊಟ್ಟಿದೆ.

ಮಧ್ಯ ಪ್ರದೇಶದ ವ್ಯಕ್ತಿಗೆ ಭಾರೀ ತೆರಿಗೆ
ಮಧ್ಯ ಪ್ರದೇಶದ ವ್ಯಕ್ತಿಗೆ ಭಾರೀ ತೆರಿಗೆ

By

Published : Jan 16, 2020, 1:41 PM IST

ಇಂದೋರ್: ಮಧ್ಯಪ್ರದೇಶದ ರವಿ ಗುಪ್ತ ಎಂಬ ವ್ಯಕ್ತಿಗೆ 3.49 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಐಟಿ ಇಲಾಖೆ ನೋಟಿಸ್ ನೀಡಿ ಶಾಕ್ ಕೊಟ್ಟಿದೆ.

ಈ ಬಗ್ಗೆ ಮಾತನಾಡಿರುವ ರವಿ ಗುಪ್ತ ನಾನು ತಿಂಗಳಿಗೆ ಕೇವಲ 6 ಸಾವಿರ ರೂಪಾಯಿ ವೇತನ ಪಡೆಯುತ್ತೇನೆ. ಆದರೆ ಐಟಿ ಇಲಾಖೆ 3.49 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಿದೆ ಎಂದಿದ್ದಾರೆ.

ಇನ್ನು ರವಿ ಅವರ ಪಾನ್ ಕಾರ್ಡ್​ ಮತ್ತು ಫೊಟೋ ಬಳಸಿಕೊಂಡು 2011ರಲ್ಲಿ ಬ್ಯಾಂಕ್​ನಲ್ಲಿ ಅಕೌಂಟ್ ಓಪನ್ ಮಾಡಿದ್ದು, ಒಟ್ಟು 132 ಕೋಟಿ ಹಣ ವ್ಯವಹಾರ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರವಿ ಗುಪ್ತ ನಾನು ಬ್ಯಾಂಕ್​ನಲ್ಲಿ ಖಾತೆ ತೆರೆದೇ ಇಲ್ಲ ಎಂದಿದ್ದು, ಐಟಿ ಇಲಾಖೆ ಆರೋಪ ಅಲ್ಲಗಳೆದಿದ್ದಾರೆ.

ABOUT THE AUTHOR

...view details