ಕರ್ನಾಟಕ

karnataka

ETV Bharat / bharat

ರತ್ಲಂನಲ್ಲಿ ‘ಕಂಜರ್​’ಗಳ ಅಟ್ಟಹಾಸ.. ಜನರಿಂದ ಚೌಕಿದಾರ್ ತೆರಿಗೆ ವಸೂಲಿ - ಕಂಜರ್ ಸಮುದಾಯದಿಂದ ತೆರಿಗೆ ಹಣ ವಸೂಲಿ

ದರೋಡೆ, ಕಳ್ಳಸಾಗಣೆ ಮತ್ತು ಅಪಹರಣ ಸೇರಿ ವಿವಿಧ ಅಪರಾಧ ಚಟುವಟಿಕೆಗಳಿಗೆ ಹೆಸರುವಾಸಿಯಾದ ಮಧ್ಯಪ್ರದೇಶದ ಕಂಜರ್ ಸಮುದಾಯದ ಜನರು ಈಗ ಗ್ರಾಮಸ್ಥರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ.

rime
rime

By

Published : Jan 11, 2021, 1:06 PM IST

ರತ್ಲಂ (ಮಧ್ಯಪ್ರದೇಶ): ದರೋಡೆ, ಕಳ್ಳಸಾಗಣೆ ಮತ್ತು ಅಪಹರಣ ಸೇರಿ ವಿವಿಧ ಅಪರಾಧ ಚಟುವಟಿಕೆಗಳಿಗೆ ಹೆಸರುವಾಸಿಯಾದ ಮಧ್ಯಪ್ರದೇಶದ ಕಂಜರ್ ಸಮುದಾಯದ ಜನರು ಈಗ ಗ್ರಾಮಸ್ಥರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಈ ಸಮುದಾಯವು ಜನರಿಂದ ಇಂಥ ತೆರಿಗೆಯನ್ನು ವಸೂಲಿ ಮಾಡುತ್ತಿದ್ದು, ಇದನ್ನು ‘ಚೌಕಿದಾರ ತೆರಿಗೆ’ ಎಂದು ಕರೆಯುತ್ತಾರೆ.

ಇತ್ತೀಚೆಗಷ್ಟೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದಿಂದ ಮಾಫಿಯಾಗಳನ್ನು ದೂರವಿಡುವ ಬಗ್ಗೆ ಮಾತನಾಡಿದ್ದರು. ಆದರೆ, ರತ್ಲಾ ಜಿಲ್ಲೆಯ ಅಲೋಟ್​​​​​ ಪ್ರದೇಶದಲ್ಲಿರುವ ಕಂಜರ್ ಸಮುದಾಯ, ಜನರನ್ನು ಹಿಂಸಿಸಿ ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ರತ್ಲಂನಲ್ಲಿ ‘ಕಂಜರ್​’ಗಳ ಅಟ್ಟಹಾಸ

ಈ ಸಂಬಂಧ 'ಈ ಟಿವಿ ಭಾರತ’ ದೊಂದಿಗೆ ಮಾತನಾಡಿದ ಗ್ರಾಮಸ್ಥ ಶಂಕರ್​ಲಾಲ್, ಕಂಜರ್ ಸಮುದಾಯದ ಸದಸ್ಯರು ಗ್ರಾಮದಲ್ಲಿ ಕಳ್ಳತನ ಮಾಡುತ್ತಾರೆ. ನಿತ್ಯ ಜನರಿಗೆ ಧಾನ್ಯ ಮತ್ತು ಹಣದ ಬೇಡಿಕೆಯಿಡುತ್ತಾರೆ. ನಮಗೆ ಕೊಡಲು ಸಾಧ್ಯವಾಗದೆ ಇದ್ದರೆ ಹಲ್ಲೆ ಮಾಡಿ, ಮನೆಯಲ್ಲಿ ಇರುವ ಸರಕು ಸಾಮಗ್ರಿಗಳನ್ನೆಲ್ಲ ದೋಚುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಂಜರ್ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅದೆಷ್ಟೋ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ, ರಾಜಸ್ಥಾನದ ಪಕ್ಕದಲ್ಲಿರುವ ಅಲೋಟ್​​ ಪ್ರದೇಶದಲ್ಲಿರುವ ಈ ಸಮುದಾಯ ಇಂದಿಗೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.

‘ಕಂಜರ್’​​​ ಅಟ್ಟಹಾಸ ತಗ್ಗಿಸಲು ಪೊಲೀಸರು ಕೈಗೊಂಡಿರುವ ಕ್ರಮ:

ಅಲೋಟ್ ಠಾಣಾ ವ್ಯಾಪ್ತಿಯಲ್ಲಿ ಈ ಎಲ್ಲ ದುರ್ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಪಟೀದರ್, ಜನರು ನೀಡಿರುವ ದೂರುಗಳ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೆ, ಕಳ್ಳತನ ನಡೆಯುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಕೂಡ ಮುಂದುವರಿದಿದೆ ಎಂದರು.

ಕಂಜರ್​ಗಳ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು:

ಕಂಜರ್​ಗಳ ದಾಳಿಗೆ ಬೇಸತ್ತ ಜನರು, ಅವರ ಅಡಗುತಾಣಗಳ ಮೇಲೆ ದಾಳಿ ನಡೆಸಿ, ಅವರನ್ನು ಅಲೋಟ್​ಗೆ ಕರೆ ತಂದ್ದರು. ಆದರೆ ರಾಜಸ್ಥಾನ ಪೊಲೀಸರು ಕಂಜರ್ ಸಮುದಾಯದವರನ್ನು ಅಪಹರಣ ಮಾಡಿದ್ದಾರೆ ಎಂದು ಆರು ರೈತರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details