ಕರ್ನಾಟಕ

karnataka

ETV Bharat / bharat

ಧಾರ್ಮಿಕ ಸ್ವಾತಂತ್ರ್ಯ ವಿಧೇಯಕಕ್ಕೆ ಮಧ್ಯಪ್ರದೇಶ ಸಂಪುಟ ಅಸ್ತು - law against love jihad

ಲವ್​ ಜಿಹಾದ್ ವಿರುದ್ಧದ 'ಧಾರ್ಮಿಕ ಸ್ವಾತಂತ್ರ್ಯ ಮಸೂದೆ-2020' ಅನ್ನು ಮಧ್ಯಪ್ರದೇಶ ಸಂಪುಟ ಅಂಗೀಕರಿಸಿದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶದ ಬಳಿಕ ಧಾರ್ಮಿಕ ಮತಾಂತರದ ವಿರುದ್ಧದ ಕಾನೂನು ಜಾರಿಗೊಳಿಸಿದ ಬಿಜೆಪಿ ಆಡಳಿತದ ಮೂರನೇ ರಾಜ್ಯ ಮಧ್ಯಪ್ರದೇಶವಾಗಿದೆ.

Madhya Pradesh govt
ಧಾರ್ಮಿಕ ಸ್ವಾತಂತ್ರ್ಯ ವಿಧೇಯಕಕ್ಕೆ ಮಧ್ಯಪ್ರದೇಶ ಸಂಪುಟ ಅಸ್ತು

By

Published : Dec 29, 2020, 2:01 PM IST

ಭೋಪಾಲ್​ (ಮಧ್ಯಪ್ರದೇಶ):ಸುಗ್ರೀವಾಜ್ಞೆ ಮೂಲಕ ಶಿವರಾಜ್​​ ಸಿಂಗ್​ ಚೌಹಾಣ್ ನೇತೃತ್ವದ ಮಧ್ಯಪ್ರದೇಶದ ಸರ್ಕಾರವು ಧಾರ್ಮಿಕ ಮತಾಂತರದ ವಿರುದ್ಧದ ವಿಧೇಯಕವನ್ನು ಅಂಗೀಕರಿಸಿದೆ. ಮಸೂದೆಯನ್ನು ರಾಜ್ಯಪಾಲರಿಗೆ ಅನುಮೋದನೆಗಾಗಿ ಕಳುಹಿಸಲಾಗಿದೆ.

ಡಿ.26 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಲವ್​ ಜಿಹಾದ್ ವಿರುದ್ಧದ 'ಧಾರ್ಮಿಕ ಸ್ವಾತಂತ್ರ್ಯ ಮಸೂದೆ-2020' ಅನ್ನು ಸರ್ಕಾರ ಮಂಡಿಸಿತ್ತು. ಇಂದು ಈ ಮಸೂದೆಯನ್ನು ಸಂಪುಟ ಅಂಗೀಕರಿಸಿದ್ದು, ಕಾನೂನು ಜಾರಿಯಾಗಲಿದೆ.

ಓದಿ:ತಲೈವಾಗೆ ‘ದೇವರ ಎಚ್ಚರಿಕೆಯ ಕರೆ’! ಸದ್ಯಕ್ಕೆ ಪಕ್ಷ ಸ್ಥಾಪನೆ ಮಾಡದಿರಲು ರಜನಿಕಾಂತ್ ನಿರ್ಧಾರ

ಈ ಮಸೂದೆಯಡಿಯಲ್ಲಿ ಬಲವಂತದ ಧಾರ್ಮಿಕ ಮತಾಂತರಕ್ಕೆ 1-5 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅಪ್ರಾಪ್ತರು, ಮಹಿಳೆ ಅಥವಾ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸಿದರೆ 2-10 ವರ್ಷಗಳ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ಹಾಕಲಾಗುತ್ತದೆ.

ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶ ಸರ್ಕಾರ ಮತ್ತು ಜೈರಾಮ್​ ಠಾಕೂರ್​​ ಹಿಮಾಚಲ ಪ್ರದೇಶ ಸರ್ಕಾರದ ನಂತರ ಲವ್​ ಜಿಹಾದ್ ವಿರುದ್ಧ ಕಾನೂನನ್ನು ಜಾರಿಗೊಳಿಸಲಿರುವ ಬಿಜೆಪಿ ಆಡಳಿತದ ಮೂರನೇ ರಾಜ್ಯ ಮಧ್ಯಪ್ರದೇಶವಾಗಿದೆ.

ABOUT THE AUTHOR

...view details