ಭೋಪಾಲ್ (ಮಧ್ಯಪ್ರದೇಶ): ಚಳಿಗಾಲದ ವಿಧಾನಸಭೆ ಅಧಿವೇಶನಕ್ಕೆ ಕೇವಲ ಒಂದು ದಿನ ಮುಂಚಿತವಾಗಿ ಮಧ್ಯಪ್ರದೇಶದ ಅಸೆಂಬ್ಲಿಯ ಐದು ಶಾಸಕರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಮಧ್ಯಪ್ರದೇಶ: ಅಧಿವೇಶನಕ್ಕೂ ಮುನ್ನ ಐವರು ಶಾಸಕರಿಗೆ ಕೋವಿಡ್ - ಮಧ್ಯಪ್ರದೇಶ ಚಳಿಗಾಲದ ಅಸೆಂಬ್ಲಿ ಅಧಿವೇಶನ
ಮಧ್ಯಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನ ನಾಳೆ ಆರಂಭವಾಗಲಿದೆ. ಅಧಿವೇಶನಕ್ಕೂ ಮುನ್ನವೇ ಐದು ಮಂದಿ ಶಾಸಕರಲ್ಲಿ COVID-19 ಸೋಂಕು ಕಾಣಿಸಿಕೊಂಡಿದೆ.

ಕೋವಿಡ್ ಪಾಸಿಟಿವ್
ವರದಿಗಳ ಪ್ರಕಾರ, ಶನಿವಾರ ಮೂವರು ಶಾಸಕರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇನ್ನಿಬ್ಬರು ಶಾಸಕರಿಗೆ ಭಾನುವಾರ ಸೋಂಕು ದೃಢಪಟ್ಟಿದೆ.
ಮಧ್ಯಪ್ರದೇಶ ಅಸೆಂಬ್ಲಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ ಸುಮಾರು 45 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.