ಇಂದೋರ್ (ಮಧ್ಯಪ್ರದೇಶ):ಶವಸಂಸ್ಕಾರವಾಗದೇ ಆಸ್ಪತ್ರೆಯಲ್ಲಿದ್ದ ಮೃತದೇಹವು ಅಸ್ಥಿಪಂಜರವಾಗಿ ಬದಲಾಗಿರುವ ಘಟನೆ ಇಂದೋರ್ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ಮಹಾರಾಜ್ ಯಶ್ವಂತ್ ರಾವ್ ಆಸ್ಪತ್ರೆಯಲ್ಲಿ (ಎಂವೈಹೆಚ್) ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಶವಾಗಾರದಲ್ಲಿ ಸ್ಟ್ರೆಚರ್ ಮೇಲೆ ಇರಿಸಲಾಗಿದ್ದ ಶವವು ಅಸ್ಥಿಪಂಜರವಾಗಿದ್ದು, ದುರ್ವಾಸನೆ ಬರುತ್ತಿದ್ದರೂ ಯಾರೂ ಕೂಡ ಅದರ ಕುರಿತು ಗಮನ ಹರಿಸಲಿಲ್ಲ ಎಂದು ಹೇಳಲಾಗುತ್ತಿದೆ.