ಮೊರೆನಾ(ಮಧ್ಯಪ್ರದೇಶ):ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಜನರಿಗೆ ಹಬ್ಬುತ್ತಿದೆ. ಇದೀಗ ಹೊರಬಿದ್ದಿರುವ ಮಾಹಿತಿ ಮಧ್ಯಪ್ರದೇಶ ಜನರ ನಿದ್ದೆಗೆಡುವಂತೆ ಮಾಡಿದೆ.
ಮಾರ್ಚ್ 17ರಂದು ದುಬೈನಿಂದ ವಾಪಸ್ ಆಗಿದ್ದ ದಂಪತಿ ಮೊರೆನಾ ಎಂಬ ಪ್ರದೇಶದಲ್ಲಿ ಮಾರ್ಚ್ 20ರಂದು ಬಂಧುಗಳು, ಸ್ನೇಹಿತರು ಹೀಗೆ ಸಾವಿರಾರು ಅತಿಥಿ ಅಭ್ಯಾಗತರಿಗೆ ಅತಿದೊಡ್ಡ ಸಂತೋಷ ಕೂಟ ಏರ್ಪಡಿಸಿದ್ದರು. ಆದ್ರೆ, ವಿದೇಶದಿಂದ ಮರಳಿದ ಈ ದಂಪತಿಗೆ ಕೊರೊನಾ ಸೋಂಕು ತಗುಲಿದೆ ಎಂದು ಇದೀಗ ವೈದ್ಯಕೀಯ ವರದಿ ಬಂದಿದೆ. ಹೀಗಾಗಿ 3 ಸಾವಿರ ಮನೆಗಳಿರುವ ಮೊರೆನಾ ಪ್ರದೇಶದ ಸುಮಾರು 26 ಸಾವಿರ ಜನರು ಮನೆ ಬಿಟ್ಟು ಹೊರಬರದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.