ಬೆಂಗಳೂರು: ನಗರದ ರಮಡಾ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಬಂಡಾಯ ಶಾಸಕರು ಇದೀಗ ಮಧ್ಯಪ್ರದೇಶದತ್ತ ಪ್ರಯಾಣ ಬೆಳೆಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕೈ ಸರ್ಕಾರ ಪತನ: ಬೆಂಗಳೂರಿಂದ ಹೊರಟ 22 ಜನ ರೆಬಲ್ ಶಾಸಕರು - ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು
ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ಬೆಂಗಳೂರಿನ ರಮಡಾ ರೆಸಾರ್ಟ್‌ನಿಂದ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.
ರಾಮದಾ ರೆಸಾರ್ಟ್‌ನಿಂದ ಹೊರಟ 22 ಜನ ರೆಬಲ್ ಶಾಸಕರು
ಕಾಂಗ್ರೆಸ್ ಪಕ್ಷದ 22 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ರಾಜೀನಾಮೆ ನೀಡಿದ್ದರು. ಈ ಮೂಲಕ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅಧಿೃಕತವಾಗಿ ಪತನಗೊಂಡಿತು.
ಈ ಹಿನ್ನೆಲೆ ಇಂದು ಬಂಡಾಯ ಶಾಸಕರು ಬೆಂಗಳೂರಿನಿಂದ ತಮ್ಮ ರಾಜ್ಯಕ್ಕೆ ಹೊರಟರು.