ಭೋಪಾಲ್ :ಬಾದಾ ಮಲಹರಾ ಕ್ಷೇತ್ರದ ಶಾಸಕ ಪ್ರದ್ಯುಮನ್ ಸಿಂಗ್ ಲೋಧಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮಧ್ಯಪ್ರದೇಶ ಕಾಂಗ್ರೆಸ್ಗೆ ಮತ್ತೊಂದು ಆಘಾತ ನೀಡಿದ್ದಾರೆ. ಈ ವಿಚಾರವನ್ನು ರಾಜ್ಯ ಬಿಜೆಪಿ ಮುಖ್ಯಸ್ಥ ವಿಷ್ಣುದತ್ ಶರ್ಮಾ ಅವರು ಇಂದು ಮಧ್ಯಾಹ್ನ ಅಧಿಕೃತ ಘೋಷಣೆ ಮಾಡಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ಗೆ ಮತ್ತೊಂದು ಶಾಕ್ ; ಶಾಸಕ ಲೋಧಿ ಬಿಜೆಪಿ ಸೇರ್ಪಡೆ - bjp State President VD Sharma.
ಬುಂದೇಲ್‌ಖಂಡ್‌ನ ಮಾಜಿ ಬಿಜೆಪಿ ಕಿಸಾನ್ ಮೋರ್ಚಾ ನಾಯಕಿ ಲೋಧಿ ಅವರು ಕಾಂಗ್ರೆಸ್ ಸೇರಿ 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಲ್ಲಿ ಅವರು ಬಿಜೆಪಿ ಸಚಿವ ಲಲಿತಾ ಯಾದವ್ ಅವರನ್ನು ಸೋಲಿಸಿದ್ದರು..
ಶಾಸಕ ಲೋಧಿ ಬಿಜೆಪಿ ಸೇರ್ಪಡೆ
ವರದಿಗಳ ಪ್ರಕಾರ, ಲೋಧಿ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರನ್ನು ಭೇಟಿ ಮಾಡಿ, ನಂತರ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ವಿ ಡಿ ಶರ್ಮಾ ಅವರನ್ನು ಭೇಟಿಯಾಗಿ ಔಪಚಾರಿಕವಾಗಿ ಬಿಜೆಪಿಗೆ ಪ್ರವೇಶಿಸಿದರು.
ವಿಶೇಷವೆಂದರೆ, ಬುಂದೇಲ್‌ಖಂಡ್‌ನ ಮಾಜಿ ಬಿಜೆಪಿ ಕಿಸಾನ್ ಮೋರ್ಚಾ ನಾಯಕಿ ಲೋಧಿ ಅವರು ಕಾಂಗ್ರೆಸ್ ಸೇರಿ 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಲ್ಲಿ ಅವರು ಬಿಜೆಪಿ ಸಚಿವ ಲಲಿತಾ ಯಾದವ್ ಅವರನ್ನು ಸೋಲಿಸಿದ್ದರು. ಇದೀಗ ಪುನಃ ಬಿಜೆಪಿ ಸೇರಿದ್ದಾರೆ.